ದಾವಣಗೆರೆ, ಫೆ. 9- ಭಾರತೀಯ ಸಂಸ್ಕೃತಿಯಲ್ಲಿ ಸೂರ್ಯನ ಆರಾಧನೆ-ಉಪಾಸನೆಗೆ ಅಪಾರವಾದ ಮಹತ್ವವಿದೆ. ನಮಸ್ಕಾರ ಪ್ರಿಯನಾದ ಸೂರ್ಯ ಭಗವಾನ್ ನಮ್ಮ ಕಣ್ಣಿಗೆ ಕಾಣುವ ನಿಜವಾದ ದೇವರು ಎಂದು ಆದರ್ಶ ಯೋಗ ಪ್ರತಿಷ್ಠಾನದ ಯೋಗ ಗುರು
ಡಾ|| ರಾಘವೇಂದ್ರ ಗುರೂಜಿ ತಿಳಿಸಿದರು.
ರಥಸಪ್ತಮಿಯ ಅಂಗವಾಗಿ ನಗರದ ಆದರ್ಶ ಯೋಗ ಪ್ರತಿಷ್ಠಾನ, ಶ್ರೀ ಮಹಾಮಾಯಿ ವಿಶ್ವಯೋಗ ಮಂದಿರ ಹಾಗೂ ಯೋಗ ಚಿಕಿತ್ಸಾ ಕೇಂದ್ರದಲ್ಲಿ ಇಂದು ಏರ್ಪಡಿಸಿದ್ದ `ಸೂರ್ಯ ನಮಸ್ಕಾರ ಯೋಗ ಯಜ್ಞ’ ಕಾರ್ಯಕ್ರಮ ಉದ್ದೇಶಿಸಿ ಅವರು ಮಾತನಾಡಿದರು.
ನಂತರ 108 ಸೂರ್ಯನ ನಾಮಾವಳಿಯೊಂದಿಗೆ 108 ಸುತ್ತಿನ ಸೂರ್ಯ ನಮಸ್ಕಾರ ಯೋಗ ಪದ್ದತಿಯನ್ನು ಪ್ರತಿಷ್ಠಾನದ ಯೋಗ ಸಾಧಕರು ಸಾಮೂಹಿಕವಾಗಿ ಪ್ರದರ್ಶನ ನೀಡಿದರು. ಎಂಟು ವರ್ಷದ ಬಾಲಕ ಮಿಥುನ್‍ಕುಮಾರ್‍ರಿಂದ 70 ವರ್ಷದ ನಿವೃತ್ತ ತಹಶೀಲ್ದಾರ್ ಆದ ವಿಶ್ವನಾಥಯ್ಯ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಎಲ್.ಐ.ಸಿ. ಅಭಿವೃದ್ಧಿ ಅಧಿಕಾರಿ ಎ.ಆರ್. ಶೇಷಾದ್ರಿ ಮತ್ತು ಅಂಚೆ ಇಲಾಖೆಯ ನಿವೃತ್ತ ಅಧಿಕಾರಿ ಶ್ರೀಮತಿ ಸುಮಂಗಲಾ ಶೇಷಾದ್ರಿ ದಂಪತಿ ಪೂಜಾ ಕಾರ್ಯಕ್ರಮವನ್ನು ನಡೆಸಿಕೊಟ್ಟರು.
ರಂಗೋಲಿ ಸೇವೆ ಶ್ರೀಮತಿ ಗೌರಮ್ಮ, ಹೂವಿನ ಅಲಂಕಾರ ಸೇವೆ ಹರಿಹರ ಅಂಚೆ ಕಛೇರಿಯ ಶ್ರೀಮತಿ ವೇದಾವತಿ, ಪ್ರಸಾದ ಸೇವೆಯನ್ನು ಅಧ್ಯಾತ್ಮ ಚಿಂತಕ ಹೆಚ್. ಮಂಜುನಾಥ್ ಅವರುಗಳು ಅರ್ಪಿಸಿದರು. ವಿದ್ಯಾರ್ಥಿ ಮುಖೇಶ್ ದೇವ್ ಸಹಕರಿಸಿದರು. ಶ್ರೀಮತಿ ಜ್ಯೋತಿಲಕ್ಷ್ಮೀ ವಾಸುದೇವ್, ಸಗಟು ಔಷಧಿ ವ್ಯಾಪಾರಿ ಸಂದೀಪ್ ವಡೋನಿ, ಭರತ್ ವಡೋನಿ, ಸಮಾಜ ಕಲ್ಯಾಣ ಇಲಾಖೆಯ ಹೆಚ್. ಸಂತೋಷ್, ದೈಹಿಕ ಶಿಕ್ಷಕ ಹೆಚ್.ಎಂ. ನಾಗರಾಜ್, ಲೆಕ್ಕ ಪರಿಶೋಧಕ ಟಿ. ಗಿರೀಶ್, ಶ್ರೀಮತಿ ಭಾಗ್ಯ ಮತ್ತು ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.