ನಿವೃತ್ತ ಯೋಧನಿಗೆ ಅದ್ಧೂರಿ ಸ್ವಾಗತ, ಮೆರವಣಿಗೆ

ದೇಶದ ರಕ್ಷಣೆಗಾಗಿ ತಮ್ಮ ಮಕ್ಕಳನ್ನು ಸೈನ್ಯಕ್ಕೆ ಕಳಿಸುವ ಮನಸ್ಸು ಮಾಡುವ ತಾಯಂದಿರು ಸಿಗುವುದು ಕಷ್ಟ. ಸೈನ್ಕಕ್ಕೆ ಮಗನನ್ನು ಕಳಿಸಿದ ಅತಾವುಲ್ಲಾ ಅವರ ತಾಯಿಯ ಹೃದಯ ಶ್ರೀಮಂತಿಕೆ ಇತರೆ ತಾಯಂದಿರಿಗೆ ಪ್ರೇರಣೆ.

– ಹೆಚ್.ಎಸ್. ಶಿವಶಂಕರ್

ಹರಿಹರ, ಫೆ. 6 – ಸೈನ್ಯದಲ್ಲಿ 22 ವರ್ಷ ಕಾಲ ಸೇವೆ ಸಲ್ಲಿಸಿ ನಿವೃತ್ತರಾಗಿ ತವರೂರಿಗೆ ಮರಳಿದ ಸೈನಿಕ ಎಂ.ಎಸ್. ಅತಾವುಲ್ಲಾ ಅವರಿಗೆ ಹರಿಹರದಲ್ಲಿ ಆತ್ಮೀಯ ಸ್ವಾಗತ ನೀಡಲಾಯಿತು.

ನಗರದ ರೈಲ್ವೆ ನಿಲ್ದಾಣದಲ್ಲಿ ಹೂವಿನ ಹಾರ ಹಾಕಿ ಅತಾವುಲ್ಲಾ ಅವರಿಗೆ ಆತ್ಮೀಯವಾಗಿ ಬರಮಾಡಿಕೊಳ್ಳಲಾಯಿತು. ನಂತರ ಅವರ ಕುಟುಂಬದವರು ಹಾಗೂ ಸಾರ್ವಜನಿಕರು ಅದ್ಧೂರಿಯಾಗಿ ಮೆರವಣಿಗೆ ನಡೆಸಿದರು.

ರೈಲ್ವೆ ನಿಲ್ದಾಣದಲ್ಲಿ ಸ್ವಾಗತದ ನಂತರ ಮಾತನಾಡಿದ ಮಾಜಿ ಶಾಸಕ ಹೆಚ್.ಎಸ್. ಶಿವಶಂಕರ್, ದೇಶದ ರಕ್ಷಣೆಗಾಗಿ ತಮ್ಮ ಮಕ್ಕಳನ್ನು ಸೈನ್ಯಕ್ಕೆ ಕಳಿಸುವ ಮನಸ್ಸು ಮಾಡುವ ತಾಯಂದಿರು ಸಿಗುವುದು ಕಷ್ಟ. ಸೈನ್ಕಕ್ಕೆ
ಮಗನನ್ನು ಕಳಿಸಿದ ಅತಾವುಲ್ಲಾ ಅವರ ತಾಯಿಯ ಹೃದಯ ಶ್ರೀಮಂತಿಕೆ ಇತರೆ ತಾಯಂದಿರಿಗೆ ಪ್ರೇರಣೆ ಎಂದರು.

ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುವುದರ ಜೊತೆಗೆ ಹಗಲು – ರಾತ್ರಿ ತಮ್ಮ ಮಕ್ಕಳು ತಮ್ಮ ಎದುರಿನಲ್ಲಿ ಇರುವಂತೆ ಬಯಸುವುದು ಸಹಜ. ಆದರೆ, ದೇಶದ ಸೇವೆಗೆ ಮಕ್ಕಳನ್ನು ಕಳಿಸುವ ಮನಸ್ಸು ಮಾಡುವ ತಾಯಂದಿರು ಸಿಗುವುದು ಕಷ್ಟ ಎಂದವರು ತಿಳಿಸಿದರು.

`ದೇಶ ಸೇವೆಯೇ ಈಶ ಸೇವೆ’ ಎಂದು ಭಾವಿಸಿಕೊಂಡು ಸುಮಾರು 22 ವರ್ಷಗಳ ಕಾಲ ಅನೇಕ ರೀತಿಯ ಸುಖ-ದುಃಖಗಳನ್ನು ಸಮನಾಗಿ ಸ್ವೀಕರಿಸಿಕೊಂಡು ಇಂದು ನಿವೃತ್ತಿ ಹೊಂದಿ ಆಗಮಿಸಿದ ಯೋಧನಿಗೆ ಹರಿಹರದ ಜನರು ಒಂದೆಡೆ ಸೇರಿ ಸ್ವಾಗತಿಸಿರುವುದು ಸಂತಸದ ದಿನ ಎಂದು ಹೇಳಿದರು.

ಈ ಸಂದರ್ಭದಲ್ಲಿ ನಗರಸಭೆ ಸದಸ್ಯರಾದ ಆರ್. ಸಿ‌ ಜಾವೇದ್, ಅಲ್ತಾಫ್, ಮುಜಾಮಿಲ್ ಬಿಲ್ಲು, ಮುಖಂಡರಾದ ಸುರೇಶ್ ಹಾದಿಮನಿ, ಮಂಜುನಾಥ್ ಅಂಗಡಿ, ಮನಸೂರು ಮದ್ದಿ, ಹೆಚ್‌. ಸುಧಾಕರ ಮತ್ತಿತರರು ಉಪಸ್ಥಿತರಿದ್ದರು

error: Content is protected !!