ರಾಣೇಬೆನ್ನೂರಿನಲ್ಲಿ 22 ನೇ ವೇದಾಂತ ಪರಿಷತ್ ಕಾರ್ಯಕ್ರಮದಲ್ಲಿ ಮಲ್ಲಯ್ಯಜ್ಜ
ರಾಣೇಬೆನ್ನೂರು, ಫೆ. 3- ಇತರರನ್ನು ನಿಂದಿಸುವುದು, ಅವರಿಗೆ ಕೆಡುಕು ಬಯ ಸುವುದು ಮಹಾಪಾಪ. ಇತರರಲ್ಲಿರುವ ಕಡಲೆ ಗಾತ್ರದ ಒಳ್ಳೆಯತನವನ್ನು ಪರ್ವತದಾಕಾರದಲ್ಲಿ ವರ್ಣಿಸಿದರೆ ಪುಣ್ಯ ಲಭಿಸಲಿದೆ ಎಂದು ಸಿದ್ಧಾರೂಢ ಮಠದ ಪೀಠಾಧಿಪತಿ ಶ್ರೀ ಮಲ್ಲಯ್ಯ ಮಹಾಸ್ವಾಮಿಗಳು ಹೇಳಿದರು.
ಮಠದಲ್ಲಿ ಮೂರು ದಿನಗಳ ಕಾಲ ನಡೆಯುತ್ತಿರುವ 22 ನೇ ವೇದಾಂತ ಪರಿಷತ್ ಹಾಗೂ 8 ನೇ ಮಹಾ ರಥೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಉಪದೇಶಿಸುತ್ತಿದ್ದರು.
ಕೊಲೆ, ಸುಲಿಗೆ ಮುಂತಾದ ಸಮಾಜದ್ರೋಹಿ ಕಾರ್ಯಗಳನ್ನು ಮಾಡಿದ ಪಾಪಾತ್ಮರು ಇತರರನ್ನು ನಿಂದಿಸಿ ತಮ್ಮ ಪಾಪದ ಸಂಗ್ರಹ ಹೆಚ್ಚಿಸಿಕೊಳ್ಳು ತ್ತಾರೆ. ಇಂತಹ ಧಾರ್ಮಿಕ ಕಾರ್ಯಗಳಲ್ಲಿ ಪಾಲ್ಗೊಂಡು, ಪಾಪದ ಹೊರೆಯನ್ನು ಕಡಿಮೆ ಮಾಡಿಕೊಂಡರೆ ಸುಂದರ ಬದುಕು ಸಾಧ್ಯ ಎಂದು ಮಲ್ಲಯ್ಯ ಸ್ವಾಮಿಗಳು ಹೇಳಿದರು.
§ನಿಂದಿಸಿ ನುಡಿಯದಿರಾರನು ಮನಸ್ಸಿಗೆ ಬಂದಂತೆ ನಡೆಯದಿಹದಲ್ಲಿ¬ ವಿಷಯ ಕುರಿತು ಹುಬ್ಬಳ್ಳಿ ಸಿದ್ಧಾರೂಢ ಮಠದ ಶ್ರೀ ಸಚ್ಚಿದಾನಂದ ಸ್ವಾಮಿಗಳು ಉಪನ್ಯಾಸ ನೀಡುತ್ತಾ, ನಿಂದಿಸಿದರೆ ಪಾಪ, ವಂದಿಸಿದರೆ ಪುಣ್ಯ ಎನ್ನುವ ಮಹಾತ್ಮರ ವಾಣಿಯನ್ನು ಅರಿತು ನಡೆಯಬೇಕು. ಪರೋಪಕಾರ, ಪರರ ನೋಯಿಸದ ಮಾತುಗಳು ಹಾಗೂ ಪರರ ಕೇಡು ಬಯಸದ ಮನಸ್ಸು ಈ ಎಲ್ಲವುಗಳನ್ನು ಅಳವಡಿಸಿಕೊಳ್ಳುವವರ ಬದುಕು ಸುಂದರಗೊಳ್ಳಲಿದೆ ಎಂದರು.
ಹಂಪಿ ಹೇಮಕೂಟದ ಶ್ರೀ ವಿದ್ಯಾನಂದ ಭಾರತಿ ಸ್ವಾಮಿಗಳು, ಸೌಟಗಿ ಶ್ರೀ ಲಿಂಗಯ್ಯ ಸ್ವಾಮಿಗಳು ಪಾಲ್ಗೊಂಡಿದ್ದರು. ಸಂಜೆ §ಸುಗುಣ ಸಂತತಿಯನು ನಿಗಮಾದಿವಿದಿಯನು¬ ವಿಷಯದ ಉಪನ್ಯಾಸ ನಡೆಯಿತು.
ಮಠದ ಭಕ್ತರಾದ ರೇವಣ್ಣ, ದೇವೇಂದ್ರಪ್ಪ, ಎಸ್. ಎಸ್. ಕುರವತ್ತಿ, ಪೂರ್ಣಿಮಾ ಅಯ್ಯನಗೌಡ್ರ, ಪೂರ್ಣಿಮಾ ಕುರವತ್ತಿ, ಚಂದ್ರು ಕರೇಗೌಡ್ರ, ಎಚ್,ಎಸ್. ಜಗದೀಶ, ಕರಬಸಪ್ಪ ಮಲ್ಲಾಡದ, ಶ್ರೀನಿವಾಸ ಹಳ್ಳಳ್ಳಿ, ಭೀಮರಡ್ಡಿ ಹಾದಿಮನಿ, ಗಿರೀಶ ಬ್ಯಾಡಗಿ ಉಪಸ್ಥಿತರಿದ್ದರು.