ದಾವಣಗೆರೆ, ಜ.28- ರಾಯಚೂರು ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ನಡೆದ 73ನೇ ಗಣರಾಜ್ಯೋತ್ಸವದ ಸಂದರ್ಭದಲ್ಲಿ ಸಂವಿಧಾನ ಶಿಲ್ಪಿ ಡಾ. ಬಿ.ಆರ್ ಅಂಬೇಡ್ಕರ್ರವರ ಭಾವಚಿತ್ರ ತೆಗೆಸಿ, ಅಪಮಾನ ಮಾಡಿದ ಅಲ್ಲಿನ ಜಿಲ್ಲಾ ನ್ಯಾಯಧೀಶರಾದ ಮಲ್ಲಿಕಾರ್ಜುನ ಗೌಡರನ್ನು ಈ ಕೂಡಲೇ ವಜಾ ಮಾಡಬೇಕೆಂದು ಆಗ್ರಹಿಸಿ, ನಗರದ ವಕೀಲರು, ವಿವಿಧ ಸಂಘಟನೆಗಳ ಮುಖಂಡರು ಜಿಲ್ಲಾಧಿಕಾರಿಗಳ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.
ಗಣರಾಜ್ಯೋತ್ಸವ ದಿನ ದಂದು ಅಂಬೇಡ್ಕರ್ ಭಾವಚಿತ್ರ ಹಾಕಲು ಸರ್ಕಾರದ ನಿರ್ದೇಶನ ವಿದೆ. ಹೀಗಿದ್ದಾಗ ನ್ಯಾಯಾ ಧೀಶರು ಸಂವಿಧಾನ ಮತ್ತು ಶಿಷ್ಟಾಚಾರವನ್ನು ಪಾಲನೆ ಮಾಡಿ ಇತರರಿಗೆ ಮಾದರಿಯಾಗಬೇಕು. ಆದರೆ ನ್ಯಾಯಾಧೀಶರಿಂದ ಸಂವಿ ಧಾನ ಶಿಲ್ಪಿಗೆ ಅಪಮಾನವಾಗಿದೆ ಎಂದು ಮನವಿ ಪತ್ರದಲ್ಲಿ ತಿಳಿಸಲಾಗಿದೆ.
ಈ ಸಂದರ್ಭದಲ್ಲಿ ಹಿರಿಯ ವಕೀಲರಾದ ಅನೀಸ್ ಪಾಷ, ಎಲ್.ಹೆಚ್. ಅರುಣ್ ಕುಮಾರ್, ರಂಗಸ್ವಾಮಿ ಕೆ.ಕೆ, ಕೃಷ್ಣನಾಯ್ಕ, ಬಿ.ಕೆ. ಮಲ್ಲಿಕಾರ್ಜುನ್, ವಿಶ್ವನಾಥ್, ಅಬ್ದುಲ್ ಸಮದ್, ಖಲೀಲ್, ಉಷಾ ಕೈಲಾಸದ್, ಜ್ಯೋತಿ, ಎಸ್. ರಾಜಪ್ಪ, ಮುಖಂಡರುಗಳಾದ ಕೆ. ತಿಪ್ಪಣ್ಣ, ಹೆಚ್.ಸಿ. ಗುಡ್ಡಪ್ಪ, ಅಂಜಿನಪ್ಪ, ರಾಘವೇಂದ್ರ ಡಿ.ಜಿ. ದಾನಪ್ಪ, ಸತೀಶ್ ಅರವಿಂದ್, ಮುಸ್ತಾಫಾ ಮತ್ತಿತರರು ಉಪಸ್ಥಿತರಿದ್ದರು.