ದಾವಣಗೆರೆ, ಜ. 17- ಬಸವಾದಿ ಶರಣ-ಶರಣೆಯರ ವಚನಗಳ ಆಚರಣೆಯಿಂದ ಸಮಾಜದ ಪ್ರಗತಿ ಸಾಧ್ಯ ಎಂದು ನಿವೃತ್ತ ಸಿಟಿಓ ಪಿ. ರುದ್ರಪ್ಪ ತಿಳಿಸಿದರು.
ನಗರದ ಸರಸ್ವತಿ ಬಡಾವಣೆಯಲ್ಲಿ ಬಸವ ಬಳಗ, ಬಸವ ಮಹಾಮನೆ ಯಿಂದ ಶತಾಯುಷಿ ಸಿದ್ಧರಾಮಣ್ಣ ಶರಣರಿಗೆ ಏರ್ಪಡಿಸಿದ್ದ ಗೌರವ ಸಮರ್ಪಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಬಸವ ಬಳಗದ ಅಧ್ಯಕ್ಷ ಎ.ಹೆಚ್. ಹುಚ್ಚಪ್ಪ, ಉಪಾಧ್ಯಕ್ಷ ಮಹಾರುದ್ರಯ್ಯ ಮಾತನಾಡಿ, ಸಿದ್ಧರಾಮಣ್ಣ ಶರಣರು ರಾಜ್ಯದ ಎಲ್ಲಾ ಶರಣರ, ಮಠಾಧೀಶರ ಜೊತೆಗೂಡಿ ಬಸವ ತತ್ವ ಪ್ರಸಾರ ಮಾಡುವುದರಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ ಎಂದು ತಿಳಿಸಿದರು.
ಭುವನೇಶ್ವರಿ, ಬಸವರಾಜ್ , ಜಿ.ಬಿ. ಚಂದ್ರಶೇಖರ್, ಬಿ.ಟಿ. ಪ್ರಕಾಶ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಅಜ್ಜಂಪುರ ಶೆಟ್ರು ಶಂಭುಲಿಂಗಪ್ಪ, ಅಗಡಿ ಮಹಾಂತೇಶ್, ಮತ್ತಿಹಳ್ಳಿಯ ಬಸವ ಬಳಗದವರು ವಚನ ಸಂಗೀತ ಸೇವೆ ಸಲ್ಲಿಸಿದರು. ಸುಮಂಗಲ ಪ್ರಕಾಶ್ ವಂದಿಸಿದರು. ದೀಪ ಪ್ರಭುದೇವ ನಿರೂಪಿಸಿದರು.