ವೃತ್ತಿ ರಂಗಭೂಮಿ ರಂಗಾಯಣ ವತಿಯಿಂದ ದೃಶ್ಯಕಲಾ ಮಹಾವಿದ್ಯಾಲಯದ ಬಯಲು ರಂಗಮಂದಿರದಲ್ಲಿ ನಡೆಯುತ್ತಿರುವ ರಾಷ್ಟ್ರೀಯ ವೃತ್ತಿ ರಂಗೋತ್ಸವದಲ್ಲಿ ಇಂದು ಸಂಜೆ 6.30 ಕ್ಕೆ ಸಮಾರೋಪ ಸಮಾರಂಭ ನಡೆಯಲಿದೆ. ಬಿ.ವಿ. ಕಾರಂತ ಪ್ರಶಸ್ತಿ ಪುರಸ್ಕೃತ ಶ್ರೀನಿವಾಸ ಜಿ. ಕಪ್ಪಣ್ಣ ಸಮಾರೋಪ ನುಡಿಗಳನ್ನಾಡುವರು. ಮಲ್ಲಿಕಾರ್ಜುನ ಕಡಕೋಳ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಐಜಿಪಿ ಡಾ. ಬಿ.ಆರ್. ರವಿಕಾಂತೇಗೌಡ, ರಂಗ ಸಮಾಜದ ಸದಸ್ಯರಾದ ಪ್ರೊ. ಲಕ್ಷ್ಮೀ ಚಂದ್ರಶೇಖರ್, ಶಶಿಧರ್ ಬಾರೀಘಾಟ್, ಡಾ. ಕೆ. ರಾಮಕೃಷ್ಣಯ್ಯ, ಎಂ.ಎಸ್. ಕೊಟ್ರೇಶ್, ಪುಷ್ಪಾಮಾಲಾ, ಅಬ್ದುಲ್ ಸಾಬ್ ಅಣ್ಣಿಗೇರಿ, ಕುಪ್ಪೇಲೂರು ವೀರಯ್ಯ ಮತ್ತಿತರರು ಭಾಗವಹಿಸಲಿದ್ದಾರೆ.
March 19, 2025