ಮಲೇಬೆನ್ನೂರು, ಮಾ. 15 – ದುಷ್ಕರ್ಮಿಗಳು ಅಡಿಕೆ ಗಿಡಗಳನ್ನು ಕಡಿದು ಹಾಕತ್ತಿರುವ ಘಟನೆ ಕುಣೆಬೆಳಕೆರೆ ಗ್ರಾಮದಲ್ಲಿ ಕಳೆದ 3-4 ದಿನಗಳಿಂದ ನಡೆಯುತ್ತಿದ್ದು, ರೈತರು ಆತಂಕದಲ್ಲಿದ್ದಾರೆ. ಗ್ರಾಮದ ಸರ್ವೇ ನಂ. 24, 25 ಮತ್ತು 26ರಲ್ಲಿರುವ ಡಿ. ರೇವಣಪ್ಪ, ಉಮೇಶ್ ಮತ್ತು ಮಲ್ಲಿಕಾರ್ಜುನ್ ಎಂಬುವವರಿಗೆ ಸೇರಿದ ತೋಟಗಳಲ್ಲಿ ಫಲಕ್ಕೆ ಬಂದಿರುವ 24 ಅಡಿಕೆ ಗಿಡಗಳನ್ನು ದುಷ್ಕರ್ಮಿಗಳು ರಾತ್ರಿ ವೇಳೆ ಕಡಿದು ಹಾಕಿದ್ದಾರೆ. ಘಟನೆಗೆ ಕಾರಣ ತಿಳಿದು ಬಂದಿಲ್ಲ. ಆದರೆ ಈ ಘಟನೆಯಿಂದಾಗಿ ಆತಂಕಗೊಂಡಿರುವ ಗ್ರಾಮದ ಮಲ್ಲೇಶಪ್ಪ ಅವರು ಮಲೇಬೆನ್ನೂರು ಠಾಣೆಗೆ ಪತ್ರ ಮುಖೇನ ವಿಷಯ ತಿಳಿಸಿದ್ದಾರೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿ, ದುಷ್ಕರ್ಮಿಗಳಿಗೆ ಬಲೆ ಬೀಸಿದ್ದಾರೆ ಎನ್ನಲಾಗಿದೆ.
ಅಡಿಕೆ ಗಿಡಕ್ಕೆ ಹಾನಿ : ಆತಂಕದಲ್ಲಿ ರೈತರು
