ದಾವಣಗೆರೆ, ಮಾ.16- ರಾಷ್ಟ್ರೀಯ ಆರೋಗ್ಯ ಅಭಿಯಾನದ ಅಡಿಯಲ್ಲಿ ನಿರ್ಮಿಸಲು ಉದ್ಧೇಶಿಸಲಾಗಿರುವ ಜಿಲ್ಲಾ ಲಸಿಕಾ ಸಂಗ್ರಹಣ ಘಟಕ ವೈಜ್ಞಾನಿಕವಾಗಿರ ಬೇಕು. ಇದರಲ್ಲಿ ಯಾವ ಲೋಪದೋಷ ಗಳು ಬಾರದಂತೆ ಅಧಿಕಾರಿಗಳು ಗಮನ ಹರಿಸಬೇಕೆಂದು ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಸೂಚನೆ ನೀಡಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಇವರ ಆಶ್ರಯದಲ್ಲಿ ಇಂದು ಆಯೋಜಿಸಲಾಗಿದ್ದ ಜಿಲ್ಲಾ ಲಸಿಕಾ ಸಂಗ್ರ ಹಣಾ ಘಟಕಕ್ಕೆ ನೂತನವಾಗಿ ನಗರದ ಡಿಹೆಚ್‌ಓ ಕಚೇರಿ ಸಮೀಪ ನಿರ್ಮಿಸಲಾಗು ತ್ತಿರುವ ಕಟ್ಟಡಕ್ಕೆ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.
ಲಸಿಕೆಗಳ ಸಂಗ್ರಹಣೆಗಾಗಿ ನಿರ್ದಿಷ್ಟವಾಗಿ ವಿನ್ಯಾಸಗೊಳಿಸಬೇಕು. ಈ ಹಿನ್ನಲೆಯಲ್ಲಿ ಕಟ್ಟಡ ಸಂಪೂರ್ಣ ನಿರ್ಮಾಣ ಆಗುವವರೆಗೂ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿ, ಕಟ್ಟಡದ ಗುಣ ಮಟ್ಟ ಮಾತ್ರವಲ್ಲದೇ ಇದಕ್ಕೆ ಬಳಸಲಾಗುವ ಎಲ್ಲಾ ಸಾಮಗ್ರಿಗಳು ಮತ್ತು ಪರಿಕರಗಳ ಗುಣಮಟ್ಟ ಪರಿಶೀಲನೆ ನಡೆಸುವಂತೆ ಡಿಹೆಚ್‌ಓಗೆ ಸೂಚನೆ ನಿಡಿದರು.
ಕೇಂದ್ರದ ವಿವರ: ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಹಭಾಗಿತ್ವದ ಆರೋಗ್ಯ ಯೋಜನೆಗಳಿಗೆ ಬೇಕಾದ ಯಾವುದೇ ಲಸಿಕೆಗಳನ್ನು ಈವರೆಗೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ತಾತ್ಕಾಲಿಕವಾಗಿ ಸಂಗ್ರಹ ಮಾಡಲಾಗುತ್ತಿತ್ತು. ಆದರೆ, ಶಾಶ್ವತ ಘಟಕ ನಿರ್ಮಿಸುವ ನಿಟ್ಟಿನಲ್ಲಿ ಇದೀಗ ರಾಷ್ಟ್ರೀಯ ಆರೋಗ್ಯ ಅಭಿಯಾನ ಅಡಿಯಲ್ಲಿ ಪ್ರತ್ಯೇಕವಾಗಿ ಲಸಿಕಾ ಸಂಗ್ರಹಣಾ ಘಟಕವನ್ನು ನಿರ್ಮಿಸಲು ಸರ್ಕಾರದಿಂದಲೇ ಟೆಂಡರು ಕರೆದು ನಿರ್ಮಿಸಲಾಗುತ್ತಿದೆ. ಈ ಘಟಕಕ್ಕೆ ಎನ್‌ಹೆಚ್‌ಎಂನಿಂದ 55 ಲಕ್ಷ ರೂ. ಅನುದಾನ ಬಂದಿದೆ.
ಈ ವೇಳೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಸ್.ಷಣ್ಮುಖಪ್ಪ, ಆರ್‌ಸಿಹೆಚ್‌ಓ ಡಾ.ಎ.ಎಂ.ರೇಣುಕಾರಾಧ್ಯ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ಜಿ.ಡಿ. ರಾಘವನ್, ಡಿಎಲ್‌ಓ ಡಾ.ಮಂಜುನಾಥ್ ಪಾಟೀಲ್, ಎಫ್‌ಡಬ್ಲುಓ ಡಾ.ರುದ್ರಸ್ವಾಮಿ, ಡಿಎಂಓ ಡಾ.ಗಂಗಾಧರ ಸೇರಿದಂತೆ ಅಧಿಕಾರಿಗಳು ಉಪಸ್ಥಿತರಿದ್ದರು. ದಾವಣಗೆರೆ, ಮಾ.16- ರಾಷ್ಟ್ರೀಯ ಆರೋಗ್ಯ ಅಭಿಯಾನದ ಅಡಿಯಲ್ಲಿ ನಿರ್ಮಿಸಲು ಉದ್ಧೇಶಿಸಲಾಗಿರುವ ಜಿಲ್ಲಾ ಲಸಿಕಾ ಸಂಗ್ರಹಣ ಘಟಕ ವೈಜ್ಞಾನಿಕವಾಗಿರ ಬೇಕು. ಇದರಲ್ಲಿ ಯಾವ ಲೋಪದೋಷ ಗಳು ಬಾರದಂತೆ ಅಧಿಕಾರಿಗಳು ಗಮನ ಹರಿಸಬೇಕೆಂದು ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಸೂಚನೆ ನೀಡಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಇವರ ಆಶ್ರಯದಲ್ಲಿ ಇಂದು ಆಯೋಜಿಸಲಾಗಿದ್ದ ಜಿಲ್ಲಾ ಲಸಿಕಾ ಸಂಗ್ರ ಹಣಾ ಘಟಕಕ್ಕೆ ನೂತನವಾಗಿ ನಗರದ ಡಿಹೆಚ್‌ಓ ಕಚೇರಿ ಸಮೀಪ ನಿರ್ಮಿಸಲಾಗು ತ್ತಿರುವ ಕಟ್ಟಡಕ್ಕೆ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.
ಲಸಿಕೆಗಳ ಸಂಗ್ರಹಣೆಗಾಗಿ ನಿರ್ದಿಷ್ಟವಾಗಿ ವಿನ್ಯಾಸಗೊಳಿಸಬೇಕು. ಈ ಹಿನ್ನಲೆಯಲ್ಲಿ ಕಟ್ಟಡ ಸಂಪೂರ್ಣ ನಿರ್ಮಾಣ ಆಗುವವರೆಗೂ ಅಧಿಕಾರಿಗಳು ಭೇಟಿ ನೀಡಿ
ಪರಿಶೀಲನೆ ನಡೆಸಿ, ಕಟ್ಟಡದ ಗುಣ ಮಟ್ಟ ಮಾತ್ರವಲ್ಲದೇ ಇದಕ್ಕೆ ಬಳಸಲಾಗುವ ಎಲ್ಲಾ ಸಾಮಗ್ರಿಗಳು ಮತ್ತು ಪರಿಕರಗಳ ಗುಣಮಟ್ಟ ಪರಿಶೀಲನೆ ನಡೆಸುವಂತೆ ಡಿಹೆಚ್‌ಓಗೆ ಸೂಚನೆ ನಿಡಿದರು.
ಕೇಂದ್ರದ ವಿವರ: ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಹಭಾಗಿತ್ವದ ಆರೋಗ್ಯ ಯೋಜನೆಗಳಿಗೆ ಬೇಕಾದ ಯಾವುದೇ ಲಸಿಕೆಗಳನ್ನು ಈವರೆಗೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ತಾತ್ಕಾಲಿಕವಾಗಿ ಸಂಗ್ರಹ ಮಾಡಲಾಗುತ್ತಿತ್ತು. ಆದರೆ, ಶಾಶ್ವತ ಘಟಕ ನಿರ್ಮಿಸುವ ನಿಟ್ಟಿನಲ್ಲಿ ಇದೀಗ ರಾಷ್ಟ್ರೀಯ ಆರೋಗ್ಯ ಅಭಿಯಾನ ಅಡಿಯಲ್ಲಿ ಪ್ರತ್ಯೇಕವಾಗಿ ಲಸಿಕಾ ಸಂಗ್ರಹಣಾ ಘಟಕವನ್ನು ನಿರ್ಮಿಸಲು ಸರ್ಕಾರದಿಂದಲೇ ಟೆಂಡರು ಕರೆದು ನಿರ್ಮಿಸಲಾಗುತ್ತಿದೆ. ಈ ಘಟಕಕ್ಕೆ ಎನ್‌ಹೆಚ್‌ಎಂನಿಂದ 55 ಲಕ್ಷ ರೂ. ಅನುದಾನ ಬಂದಿದೆ.
ಈ ವೇಳೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಸ್.ಷಣ್ಮುಖಪ್ಪ, ಆರ್‌ಸಿಹೆಚ್‌ಓ ಡಾ.ಎ.ಎಂ.ರೇಣುಕಾರಾಧ್ಯ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ಜಿ.ಡಿ. ರಾಘವನ್, ಡಿಎಲ್‌ಓ ಡಾ.ಮಂಜುನಾಥ್ ಪಾಟೀಲ್, ಎಫ್‌ಡಬ್ಲುಓ ಡಾ.ರುದ್ರಸ್ವಾಮಿ, ಡಿಎಂಓ ಡಾ.ಗಂಗಾಧರ ಸೇರಿದಂತೆ ಅಧಿಕಾರಿಗಳು ಉಪಸ್ಥಿತರಿದ್ದರು.