ಅಂತರರಾಷ್ಟ್ರೀಯ ಮಹಿಳಾ ದಿನೋತ್ಸವ ಅಂಗವಾಗಿ ಬಾಪೂಜಿ ವಿದ್ಯಾಸಂಸ್ಥೆ ವತಿಯಿಂದ ನಡೆಯ ಲಿರುವ ಬಾಪೂಜಿ ವಿದ್ಯಾಸಂಸ್ಥೆಯ ಅಂತರ ಕಾಲೇಜು ಸ್ಪರ್ಧೆಗಳು – `ಪಾರ್ವತಿ ಕಲೋತ್ಸವ’ ಕಾರ್ಯಕ್ರಮದ ಉದ್ಘಾಟನಾ ಸಮಾರಂಭವು ಧ.ರಾ.ಮ ವಿಜ್ಞಾನ ಕಾಲೇಜಿನ ಡಾ. ಎಸ್.ಎಸ್. ಸೆಮಿನಾರ್ ಹಾಲ್‌ನಲ್ಲಿ ಇಂದು ಬೆಳಿಗ್ಗೆ 10ಕ್ಕೆ ನಡೆಯಲಿದೆ. ಮುಖ್ಯ ಅತಿಥಿಯಾಗಿ ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಭಾಗವಹಿಸಲಿದ್ದು, ಡಿ.ಆರ್.ಎಂ. ಸೈನ್ಸ್ ಕಾಲೇಜಿನ ನಿವೃತ್ತ ಪ್ರಾಚಾರ್ಯ ರಾದ ಶ್ರೀಮತಿ ಶಕುಂತಲಾ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಕಾಲೇಜಿನ ಪ್ರಾಂಶುಪಾಲರಾದ ಶ್ರೀಮತಿ ಎಂ.ಪಿ. ರೂಪಶ್ರೀ ಅಧ್ಯಕ್ಷತೆ ವಹಿಸುವರು.
March 13, 2025