ವಿಶೇಷಚೇತನರ ಮಾಸಿಕ ಪಿಂಚಣಿ ಹೆಚ್ಚಳಕ್ಕೆ ಒತ್ತಾಯ

ವಿಶೇಷಚೇತನರ ಮಾಸಿಕ ಪಿಂಚಣಿ ಹೆಚ್ಚಳಕ್ಕೆ ಒತ್ತಾಯ

ಸಂಸತ್ತಿನಲ್ಲಿ ಗಮನ ಸೆಳೆದ ಸಂಸದೆ ಡಾ. ಪ್ರಭಾ

ದಾವಣಗೆರೆ, ಮಾ. 11- ಇಂದಿರಾಗಾಂಧಿ ರಾಷ್ಟ್ರೀಯ ವಿಶೇಷಚೇತನರ ಪಿಂಚಣಿ ಯೋಜನೆ ಯಡಿ ಫಲಾನುಭವಿಗಳಿಗೆ ತಿಂಗಳಿಗೆ ಕೇವಲ‌ 300 ರೂ. ನೀಡಲಾಗುತ್ತಿದೆ. ಇದರಿಂದ ಮೂಲಭೂತ ಅಗತ್ಯಗಳನ್ನು ಪೂರೈಸಲು ಸಾಧ್ಯವಿಲ್ಲ‌. ಆದ್ದರಿಂದ‌ ಪಿಂಚಣಿ ಮೊತ್ತ ಏರಿಕೆಗೆ ಕೇಂದ್ರ ಸರ್ಕಾರ ಕ್ರಮಕೈಗೊಳ್ಳಬೇಕು ಎಂದು ಲೋಕಸಭಾ ಸದಸ್ಯರಾದ ಡಾ. ಪ್ರಭಾ ಮಲ್ಲಿಕಾರ್ಜುನ್ ಒತ್ತಾಯಿಸಿದ್ದಾರೆ.

ನವದೆಹಲಿಯ ಸಂಸತ್ತಿನಲ್ಲಿ ನಡೆದ ಕಲಾಪದ ಪ್ರಶ್ನೋತ್ತರ ವೇಳೆಯಲ್ಲಿ ಮಾತನಾಡಿದ ಸಂಸದರು  ವಿಶೇಷಚೇತನರು‌ ತಮ್ಮ ಮೂಲಭೂತ ಅಗತ್ಯ ಗಳನ್ನು‌ ನೋಡಿಕೊಳ್ಳಲು ಅಲ್ಪ ಮೊತ್ತದ‌ ಮಾಸಾಶನ ದಿಂದ‌ ಸಾಧ್ಯ ವಾಗುವುದಿಲ್ಲ. ಆದ್ದರಿಂದ ಮಾಸಾಶನ ಹೆಚ್ಚಿಸಬೇಕೆಂದು‌ ಒತ್ತಾಯಿಸಿದರು. 

ಪ್ರಸ್ತುತ, 80% ಅಥವಾ ಅದಕ್ಕಿಂತ ಹೆಚ್ಚಿನ ಅಂಗ ವಿಕಲತೆಯನ್ನು ಹೊಂದಿರುವ ವ್ಯಕ್ತಿಗಳಿಗೆ ಮಾತ್ರ ಅರ್ಹತೆ ಇದೆ. 40% ಅಥವಾ ಹೆಚ್ಚು ಅಂಗವಿಕಲತೆಯನ್ನು ಹೊಂದಿ ರುವವರಿಗೂ ಈ ಯೋಜನೆಯ ಲಾಭ ವನ್ನು ವಿಸ್ತರಿಸುವುದರ ಬಗ್ಗೆ ಪರಿಗಣಿಸ ಬೇಕೆಂದು ಸದನದ ಗಮನ ಸೆಳೆದರು.

ಸಂಸದರ ಪ್ರಶ್ನೆಗೆ ಕೇಂದ್ರ ಗ್ರಾಮೀಣ ವಿಕಾಸ್ ಸಚಿವ ಶಿವರಾಜ್ ಸಿನ್ಹಾ ಚೌಹಾಣ್ ಉತ್ತರಿಸುತ್ತಾ, ಕೇಂದ್ರ ಸರ್ಕಾರದಲ್ಲಿ ಈ ಬಗ್ಗೆ ಯಾವುದೇ ಪ್ರಸ್ತಾಪಗಳಿಲ್ಲ. ಆದರೆ ಆಯಾ ರಾಜ್ಯಗಳ ವ್ಯಾಪ್ತಿಯಲ್ಲಿ ವಿಶೇಷಚೇತನರ ಮಾಸಾಶನ ಹೆಚ್ಚಳ ಮಾಡಬಹುದಾಗಿದೆ ಎಂದರು. 

ದಾವಣಗೆರೆ ಸಂಸದರು ವಿಶೇಷಚೇತನರ ಮಾಸಿಕ ಪಿಂಚಣಿ ಹೆಚ್ಚಳ ಕುರಿತು ಸದನದ ಗಮನ ಸೆಳೆದಿರುವುದು ವಿಶೇಷವಾಗಿತ್ತು.

error: Content is protected !!