ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ವಿದ್ಯಾನಗರದ ಭಾ.ವಿ.ಪ ಗೌತಮ್ ಶಾಖೆ ಕಚೇರಿಯಲ್ಲಿ ಇಂದು ಬೆಳಿಗ್ಗೆ 11ಕ್ಕೆ ಆಚರಿಸಲಾಗುವುದು.
ಅಲ್ಲಿ ಕೈ ಕಸೂತಿ ತರಬೇತಿ ಪಡೆಯುತ್ತಿರುವ ಹೆಣ್ಣು ಮಕ್ಕಳನ್ನು ಉದ್ದೇಶಿಸಿ ಡಾ. ಮಾಧವಿ ಭಿಡೆ ಹಾಗೂ ಡಾ. ಆರತಿ ಸುಂದರೇಶ್ `ಮಹಿಳೆ ಮತ್ತು ಆರೋಗ್ಯ’ ಅನ್ನುವ ವಿಚಾರ ದ ಬಗ್ಗೆ ಮಾಹಿತಿ ನೀಡಲಿದ್ದಾರೆ ಎಂದು ಗೌತಮ ಶಾಖೆ ಅಧ್ಯಕ್ಷ ಅಜ್ಜಂಪುರ ಶೆಟ್ರು ವಿಜಯ್ ಕುಮಾರ್ ತಿಳಿಸಿದ್ದಾರೆ.