ಹರಿಹರ, ಮಾ.9- ಅಹಿಂದ ಹಾಗೂ ಶೋಷಿತ ಸಮುದಾಯಗಳ ವೇದಿಕೆ ಹರಿ ಹರ ತಾಲ್ಲೂಕು ಘಟಕ ಹಾಗೂ ಜಿಲ್ಲಾ ಹಾಗೂ ಶೋಷಿತ ಸಮುದಾಯಗಳ ವೇದಿಕೆ ಇವರುಗಳ ಸಂಯುಕ್ತಾಶ್ರಯದಲ್ಲಿ, ನಗರದ ಹೈಸ್ಕೂಲ್ ಬಡಾವಣೆಯ ಡಾ. ಅಂಬೇಡ್ಕರ್ ಭವನದಲ್ಲಿ ನಡೆದ ಕಾಂತ ರಾಜ್ ಆಯೋಗ ನಡೆಸಿರುವ ಸಾಮಾಜಿಕ, ಶೈಕ್ಷಣಿಕ ಸಮೀಕ್ಷಾ ವರದಿ ಬಿಡುಗಡೆ ಹಾಗೂ ಅನು ಷ್ಠಾನಕ್ಕಾಗಿ ಆಗ್ರಹಿಸಿ ಅಹಿಂದ ಹಾಗೂ ಶೋಷಿತ ವರ್ಗಗಳ ಸಭೆಯನ್ನು ಹಮ್ಮಿಕೊಳ್ಳಲಾಗಿತ್ತು.
ವಿಧಾನ ಪರಿಷತ್ ಸದಸ್ಯ ಅಬ್ದುಲ್ ಜಬ್ಬರ್ ಸಾಬ್ ಅವರು ಗಿಡಕ್ಕೆ ನೀರು ಹಾಕುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಅಹಿಂದ ಅಧ್ಯಕ್ಷರು ಹಾಗೂ ನಿವೃತ್ತ ಪೊಲೀಸ್ ವರಿಷ್ಠಾಧಿಕಾರಿ ಎನ್.ರುದ್ರಮುನಿ, ವಕೀಲ ರಾಮಚಂದ್ರ ಕಲಾಲ್, ನಿವೃತ್ತ ಪೊಲೀಸ್ ವರಿಷ್ಠಾಧಿಕಾರಿ ರವಿನಾರಾಯಣ, ನಿವೃತ್ತ ಪ್ರೊ. ಡಾ.ಎ.ಬಿ.ರಾಮಚಂದ್ರಪ್ಪ, ಮುಖಂಡರಾದ ಜಿ.ಹೆಚ್.ಮರಿಯೋಜಿರಾವ್, ದಾವಣ ಗೆರೆ ಜಿಲ್ಲಾ ವಕ್ಫ್ ಬೋರ್ಡ್ ಅಧ್ಯಕ್ಷ, ಸಿರಾಜ್ ಅಹಮದ್, ಕೃಷ್ಣಮೂರ್ತಿ, ನಗರಸಭೆ ಮಾಜಿ ಸದಸ್ಯ ಬಿ.ರೇವಣಸಿದ್ದಪ್ಪ, ಹೆಚ್.ಕೆ.ಕೊಟ್ರಪ್ಪ, ಹೆಚ್.ಮಲ್ಲೇಶ್, ಡಿಎಸ್ಎಸ್ ಸಂಚಾಲಕ ಪಿ.ಜೆ.ಮಹಾಂತೇಶ್, ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಇಲಿಯಾಸ್ ಅಹ್ಮದ್, ಆಶಿಶ್ ಅಹ್ಮದ್, ಸಿ.ಎನ್. ಹುಲುಗೇಶ್, ಬಿ.ಎನ್.ರಮೇಶ್, ಮಹಮ್ಮದ್ ಫೈರೋಜ್ ಅಹ್ಮದ್ ಮತ್ತಿತರರು ಉಪಸ್ಥಿತರಿದ್ದರು. ಸ್ವಾಗತವನ್ನು ಆಶಿಫ್ ಅಹಮದ್, ನಿರೂಪಣೆಯನ್ನು ಸಿ.ಎನ್. ಹುಲುಗೇಶ್ ಅವರು ನೆರವೇರಿಸಿದರು.