ರಾಣೇಬೆನ್ನೂರು, ಮಾ.9- ಪಟ್ಟಣದ ಗೌರಿಶಂಕರ ನಗರದಲ್ಲಿನ ನಂದಿ ಕೋ-ಆಪರೇಟಿವ್ ಸೊಸೈಟಿಯನ್ನು ವಿಧಾನಸಭಾ ಸಭಾಪತಿ ರುದ್ರಪ್ಪ ಲಮಾಣಿ ಉದ್ಘಾಟಿಸಿದರು.
ಸಂಘಗಳ ಸಹಾಯ ಸಹಕಾರದಲ್ಲಿ ನಡೆಯುತ್ತಿರುವ ಸೊಸೈಟಿಗಳು ತಮ್ಮ ವ್ಯವಹಾರವನ್ನು ಕಟ್ಟುನಿಟ್ಟಾಗಿ ವ್ಯವಹರಿಸಬೇಕು. ಹಾಗೆಯೇ ಸಾಲಗಾರರು ಸಹ ಸಾಲದ ಮರು ಪಾವತಿಯನ್ನು ಸಕಾಲದಲ್ಲಿ ಮಾಡಿದರೆ ಸೊಸೈಟಿಗಳು ಉಳಿಯಲಿವೆ ಎಂದು ನಂದಿಗುಡಿ ಸಿದ್ದರಾಮೇಶ್ವರ ಶಿವಾಚಾರ್ಯ ಶ್ರೀಗಳು ಹೇಳಿದರು.
ಈ ಸಂದರ್ಭದಲ್ಲಿ ಬ್ಯಾಡಗಿ ಶಾಸಕ ಬಸವರಾಜ್ ಶಿವಣ್ಣನವರ್, ಸೊಸೈಟಿ ಅಧ್ಯಕ್ಷ ಕುಮಾರ ಸ್ವಾಮಿ, ಉಪಾಧ್ಯಕ್ಷ ಆರ್.ಜೆ. ಪಾಟೀಲ್, ನಿರ್ದೇಶಕರಾದ ಎಂ.ಎನ್.ಕೆಂಪಗೌಡ್ರ, ಎಸ್.ಬಿ. ಮೂಲೇರ, ಆನಂದಯ್ಯ ದೇವರಮನಿ, ಚನ್ನಬಸಪ್ಪ ಸಂಗಪ್ಪನವರ ಹಾಗೂ ಇತರರು ಇದ್ದರು.