ಹರಪನಹಳ್ಳಿ, ಮಾ. 9 – ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ನಿರ್ದೇ ಶನದಂತೆ ನಡೆದ ತಾಲ್ಲೂಕು ಸೇವೆಗಳ ಪ್ರಾಧಿಕಾರದ ವತಿಯಿಂದ ಹರಪನಹಳ್ಳಿ ಉಭಯ ನ್ಯಾಯಾಲಯಗಳಲ್ಲಿ ಶನಿವಾರ ಆಯೋಜಿಸಿದ್ದ ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ ಒಟ್ಟು 1759 ಪ್ರಕರಣ ಗಳನ್ನು ಕೈಗೆತ್ತಿಕೊಂಡು, 1444 ಪ್ರಕರಣ ಗಳನ್ನು ಹಿರಿಯ ಸಿವಿಲ್ ನ್ಯಾಯಾಲಯದ ಹಿರಿಯ ನ್ಯಾಯಾಧೀಶರಾದ ಆರ್. ಉಷಾ ರಾಣಿ ಮತ್ತು ಜೆ.ಎಂ.ಎಫ್.ಸಿ. ನ್ಯಾಯಾಲ ಯದ ನ್ಯಾಯಾಧೀಶರಾದ ಎಸ್.ಪಿ. ಮನು ಶರ್ಮ ಅವರ ನೇತೃತ್ವದಲ್ಲಿ ರಾಜೀ ಸಂಧಾ ನದ ಮೂಲಕ ಇತ್ಯರ್ಥ ಪಡಿಸಿದರು.
ಪಟ್ಟಣದ ಉಭಯ ನ್ಯಾಯಾ ಲಯದಲ್ಲಿ ನಡೆದ ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ ರಸ್ತೆ ಅಪಘಾತ, ಚೆಕ್ ಬೌನ್ಸ್, ಬ್ಯಾಂಕ್ ಸಾಲ ವಸೂಲಿ, ಜಮೀನು ವಿವಾದ, ಕೌಟುಂಬಿಕ ದೌರ್ಜ ನ್ಯ, ಕ್ರಿಮಿ ನಲ್ ಪ್ರಕರಣ, ಮೋಟಾರು ವಾಹನ, ಸಹ ಕಾರಿ ಬ್ಯಾಂಕುಗಳು, ನಿವೇಶನ ಮಾರಾಟ ಒಳಗೊಂಡಂತೆ ಹಿರಿಯ ಸಿವಿಲ್ ನ್ಯಾಯಾ ಲಯದ ನ್ಯಾಯಾಧೀಶರಾದ ಆರ್. ಉಷಾರಾಣಿ ಅವರ ನ್ಯಾಯಾಲಯದಲ್ಲಿ ಒಟ್ಟು 845 ಪ್ರಕರಣಗಳ ಪೈಕಿ 679 ಪ್ರಕರಣಗಳನ್ನು ಇತ್ಯರ್ಥಪಡಿಸಿ, ಒಟ್ಟು 18.09 ಕೊಟಿ. ರೂ.ಗಳು ರಸ್ತೆ ಅಫಘಾತ ಸೇರಿದಂತೆ ಇತರೆ ಪ್ರಕರಣಗಳಿಂದ ಹಣದ ರೂಪದಲ್ಲಿ ಪರಿಹಾರ ಇತ್ಯರ್ಥ ಪಡಿಸಿ ದರು. ಬ್ಯಾಂಕ್ ಸಾಲಕ್ಕೆ ಸಂಬಂಧಿಸಿದಂತೆ ಇತರೆ ಪ್ರಕರಣಗಳನ್ನು ಇತ್ಯರ್ಥ ಪಡಿಸಿದರು. ಕಿರಿಯ ಸಿವಿಲ್ ನ್ಯಾಯಾ ಲಯದ ನ್ಯಾಯಾಧೀಶರಾದ ಎಸ್.ಪಿ. ಮನುಶರ್ಮ ಅವರ ನ್ಯಾಯಾಲಯದಲ್ಲಿ ಒಟ್ಟು 907 ಪ್ರಕರಣಗಳ ಪೈಕಿ 765 ಪ್ರಕಣಗಳನ್ನು ಇತ್ಯರ್ಥ ಪಡಿಸಿ, ಒಟ್ಟು 84 ಲಕ್ಷದ 90 ಸಾವಿರ ರೂ.ಗಳನ್ನು ಹಣದ ರೂಪದಲ್ಲಿ ಇತ್ಯರ್ಥ ಪಡಿಸಿದರು. ಉಭಯ ನ್ಯಾಯಾಲಗಳಲ್ಲಿ ಬ್ಯಾಂಕ್ ವಸೂಲಾತಿ ಹಣವನ್ನು ಹೊರತು ಪಡಿಸಿ ಉಭಯ ನ್ಯಾಯಾಲಯಗಳಿಂದ ಒಟ್ಟು 1393 ಪ್ರಕರಣ ಗಳ ಜೊತೆ ಉಭಯ ನ್ಯಾಯಾಲಯಗಳಿಂದ ಒಟ್ಟು – 2.65 ಲಕ್ಷ. ರೂ.ಗಳ ಮೊತ್ತವನ್ನು ರಾಜೀ ಸಂಧಾ ನದ ಮೂಲಕ ಇತ್ಯರ್ಥ ಪಡಿಸಿದರು.
ಈ ಸಂದರ್ಭದಲ್ಲಿ ವಕೀಲರ ಸಂಘದ ಟಿ.ವೆಂಕಟೇಶ್, ಉಪಾಧ್ಯಕ್ಷ ಮಂಜುನಾಥ್ ಎಸ್. ಬಾಗಳಿ, ಕಾರ್ಯ ದರ್ಶಿ. ಎಂ. ಮಲ್ಲಪ್ಪ, ಸರ್ಕಾರಿ ಅಭಿ ಯೋಜಕರಾದ ಎನ್. ಮೀನಾಕ್ಷಿ, ನಿರ್ಮಲ, ಆನಂದ, ಬಂಡ್ರಿ, ಸಿವಿಲ್ ನ್ಯಾಯಾಲಯದ ಸಿಬ್ಬಂದಿಗಳಾದ ನಟರಾಜ್, ನಾಗರಾಜ್, ತಾಲ್ಲೂಕು ಕಾನೂನು ಸೇವಾ ಸಮಿತಿಯ ಸದಸ್ಯರಾದ ಕೋಟ್ರೇಶ್, ಬಸವರಾಜ್ ಮತ್ತು ಇತರರು ಇದ್ದರು.