ದೇವಬೆಳಕೆರೆ ಪಿಕಪ್ ಡ್ಯಾಂ ನಾಲೆ ಹೂಳೆತ್ತಿಸಿದ ನಂದಿಗಾವಿ ಶ್ರೀನಿವಾಸ್

ದೇವಬೆಳಕೆರೆ ಪಿಕಪ್ ಡ್ಯಾಂ ನಾಲೆ ಹೂಳೆತ್ತಿಸಿದ ನಂದಿಗಾವಿ ಶ್ರೀನಿವಾಸ್

ಮಲೇಬೆನ್ನೂರು, ಮಾ. 9 – ದೇವರಬೆಳಕೆರೆ ಪಿಕಪ್ ಡ್ಯಾಂನ ಗಾಂಜಿ ವೀರಪ್ಪ ನಾಲೆಯಲ್ಲಿ ತುಂಬಿಕೊಂಡಿದ್ದ ಹೂಳನ್ನು ಕಾಂಗ್ರೆಸ್ ಮುಖಂಡ ನಂದಿಗಾವಿ ಶ್ರೀನಿವಾಸ್ ಅವರು ತಮ್ಮ ಸ್ವಂತ ಹಣದಲ್ಲಿ ಇಟಾಚಿಯಿಂದ ಸ್ವಚ್ಛಗೊಳಿಸುವ ಮೂಲಕ ರೈತರಿಗೆ ನೆರವಾಗಿದ್ದಾರೆ.

ನಾಲೆಯಲ್ಲಿ ಹೂಳು ತುಂಬಿಕೊಂಡಿದ್ದರಿಂದ ನೀರು ಮುಂದಕ್ಕೆ ಹೋಗುತ್ತಿರಲಿಲ್ಲ. ಇದರಿಂದಾಗಿ ದೇವರಬೆಳಕೆರೆ, ಕುಣೆಬೆಳಕೆರೆ, ನಂದಿತಾವರೆ, ಎಕ್ಕೆಗೊಂದಿ ಮತ್ತು ಭಾನುವಳ್ಳಿ ಗ್ರಾಮಗಳ ಜಮೀನುಗಳಿಗೆ ನೀರು ತಲುಪುವುದು ಕಷ್ಟವಾಗಿತ್ತು. ನಾಲೆಯಲ್ಲಿ ಹೂಳು ಎತ್ತುವ ಬಗ್ಗೆ ರೈತರು ನೀರಾವರಿ ಇಲಾಖೆಗೆ ಅನೇಕ ಬಾರಿ ಮನವಿ ಮಾಡಿದ್ದರೂ ಯಾವುದೇ ಸ್ಪಂದನೆ ಸಿಕ್ಕಿರಲಿಲ್ಲ. ರೈತರ ಕೋರಿಕೆ ಮೇರೆಗೆ ನಂದಿಗಾವಿ ಶ್ರೀನಿವಾಸ್ ಅವರು ಗಾಂಜೀ ವೀರಪ್ಪ ನಾಲೆ ಪಾತ್ರದ ಹಳ್ಳಿಗಳ ರೈತರ ಸಮ್ಮುಖದಲ್ಲಿ ಇತ್ತೀಚೆಗೆ ಇಟಾಚಿಯಿಂದ ನಾಲೆಯಲ್ಲಿ ತುಂಬಿಕೊಂಡಿದ್ದ ಹೂಳು ಎತ್ತಿಸಿ ನೀರು ಸರಾಗವಾಗಿ ಮುಂದೆ ಸಾಗುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಶ್ರೀನಿವಾಸ್ ಅವರನ್ನು ನಾಲೆ ಪಾತ್ರದ ರೈತರು ಸನ್ಮಾನಿಸಿ, ಅಭಿನಂದಿಸಿದರು.

ಕಳೆದ ವರ್ಷವೂ ಈ ನಾಲೆಯಲ್ಲಿ ಹೂಳು ತುಂಬಿಕೊಂಡಿದ್ದಾಗ ಶಾಸಕ ಬಿ.ಪಿ. ಹರೀಶ್, ವೈ. ದ್ಯಾವಪ್ಪ ರೆಡ್ಡಿ ಮತ್ತಿತರರು ಸೇರಿ ತಮ್ಮ ಸ್ವಂತ ಹಣದಲ್ಲಿ ಹೂಳನ್ನು ಎತ್ತಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

error: Content is protected !!