ಬಿ.ಎಸ್.ಸಿ ಎಕ್ಸ್‌ ಕ್ಯೂಸಿವ್‌ನಲ್ಲಿ ಮಹಿಳಾ ದಿನಾಚರಣೆ

ಬಿ.ಎಸ್.ಸಿ ಎಕ್ಸ್‌ ಕ್ಯೂಸಿವ್‌ನಲ್ಲಿ ಮಹಿಳಾ ದಿನಾಚರಣೆ

ದಾವಣಗೆರೆ, ಮಾ.10- ನಗರದ   ಜಿ.ಎಂ. ವಿಶ್ವವಿದ್ಯಾನಿಲಯದ ಮಹಿಳಾ ಸಬಲೀಕರಣ ಘಟಕದ ವತಿಯಿಂದ ಡೆಂಟಲ್ ಕಾಲೇಜು ರಸ್ತೆಯಲ್ಲಿರುವ ಬಿ.ಎಸ್.ಸಿ ಎಕ್ಸ್‌ಕ್ಲೂಸಿವ್‌ನಲ್ಲಿ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ  ಅಂಗವಾಗಿ `ವಾಯ್ಸ್ ಆಫ್ ವುಮೆನ್’ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಈ ಸಂದರ್ಭದಲ್ಲಿ ಮಹಿಳೆಯರಿಗಾಗಿ ಕೆಲವೊಂದು ಸ್ಪರ್ಧೆಗಳನ್ನು ಏರ್ಪಡಿಸಿ  ಬಹುಮಾನ ವಿತರಿಸಲಾಯಿತು. ಜಿ.ಎಂ. ವಿವಿ ಮಹಿಳಾ ಸಬಲೀಕರಣ ಘಟಕದ ಅಧ್ಯಕ್ಷರಾದ ಡಾ. ಶ್ವೇತಾ ಮರಿಗೌಡರ್,  ಸದಸ್ಯರಾದ ಡಾ. ಶ್ವೇತಾ ಹೆಚ್. ಎಸ್, ಅನುರೂಪ ಕುಮಾರಿ ಆರ್, ನೀಲಾಂಬಿಕೆ ಎಸ್, ನಿವೇದಿತ, ಸ್ವಾತಿ ಡಿ.ಎಂ, ಡಾ. ಜಗದೀಶ್ವರಿ, ಅನು ವಿ. ಬಿ., ಸಯದ್ ಅಂಜುಮ್, ಪೂಜಾ ಎಂ.ವಿ, ಅನನ್ಯ ಹಾಗೂ ವಿದ್ಯಾರ್ಥಿ ವೃಂದದವರು ಕಾರ್ಯಕ್ರಮ ನಡೆಸಿಕೊಟ್ಟರು.  

ಬಿ.ಎಸ್.ಸಿ ಎಕ್ಸ್‌ಕ್ಲೂಸಿವ್‌ನ ವೀರಣ್ಣ ಮತ್ತು ಸಿಬ್ಬಂದಿ ವರ್ಗದವರು  ಉಪಸ್ಥಿತರಿದ್ದರು.

error: Content is protected !!