ದಾವಣಗೆರೆ, ಮಾ. 10- ಬರುವ ಮೇ 7 ರಿಂದ 12 ವರೆಗೆ 6 ದಿನಗಳ ಕಾಲ ಅಂತರರಾಷ್ಟ್ರೀಯ ಕನ್ನಡ ಸಮ್ಮೇಳನ ಮತ್ತು ವಸ್ತು ಪ್ರದರ್ಶನವನ್ನು ಆಯೋಜಿಸಲಾಗಿದ್ದು, ಸಮ್ಮೇಳನದ ಕೆಲಸ ಕಾರ್ಯಗಳನ್ನು ನಿರ್ವಹಿಸಲು ಕಛೇರಿಯನ್ನು ಕುವೆಂಪು ಕನ್ನಡ ಭವನದ ಗ್ರಂಥಾಲಯದಲ್ಲಿ ತೆರೆಯಲಾಗಿದೆ.
ವಿಶ್ವ ಕನ್ನಡಿಗ ಟ್ರಸ್ಟ್, ವಿಕಾಸ ಎಕ್ಸ್ಪೋ ಮತ್ತು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಇವರುಗಳ ಸಂಯುಕ್ತಾಶ್ರಯದಲ್ಲಿ ಅಂತರರಾಷ್ಟ್ರೀಯ ಸಾಹಿತ್ಯಿಕ, ಶೈಕ್ಷಣಿಕ, ಕೃಷಿ, ಯೂ ಟ್ಯೂಬ್, ಸಿನಿಮಾ ಕ್ಷೇತ್ರ ಹೀಗೆ 10 ಕ್ಷೇತ್ರಗಳ ಕಂಪನ್ನು ಇಡೀ ವಿಶ್ವಕ್ಕೆ ಪಸರಿಸುವ ದೃಷ್ಟಿಯಿಂದ ಈ ಸಮ್ಮೇಳನವನ್ನು ಆಯೋಜಿಸಲಾಗಿದೆ. ಜಿಲ್ಲಾ ಕಸಾಪ ಅಧ್ಯಕ್ಷ ಬಿ. ವಾಮದೇವಪ್ಪ ಅವರು ಉದ್ಘಾಟನೆಯ ಪೂಜಾ ಕಾರ್ಯಕ್ರಮವನ್ನು ನೆರವೇರಿಸಿದರು.