ದಾವಣಗೆರೆ, ಮಾ. 10 – ನಗರದ ಹೈಸ್ಕೂಲ್ ಮೈದಾನದಲ್ಲಿ ಹಾಕಲಾಗಿರುವ ಕೈಮಗ್ಗ ಮತ್ತು ಕರಕುಶಲ ವಸ್ತುಗಳ ಪ್ರದರ್ಶನ, ಮಾರಾಟ ಇಂಡಿಯನ್ ಕ್ರಾಫ್ಟ್ ಎಕ್ಸ್ಪೋ ಮಳಿಗೆಯನ್ನು ನಗರದ ದಾವಣಗೆರೆ ಹರಿಹರ ನಗರಾದ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಿನೇಶ್ ಕೆ. ಶೆಟ್ಟಿ ಅವರು ಉದ್ಘಾಟಿಸಿದರು. ನಗರದಲ್ಲಿ ಕರಕುಶಲ ಕೈಮಗ್ಗ ವಸ್ತುಗಳು ಸುಂದರವಾಗಿವೆ. ಕರಕುಶಲಕರ್ಮಿಗಳಿಗೆ ಪ್ರೋತ್ಸಾಹ ಸಿಗಲಿ ಎಂದು ಆಶಿಸಿದರು.
ಈ ಸಂದರ್ಭದಲ್ಲಿ ಪ್ರಮೋದ್, ಲೋಕೇಶ್, ಹರೀಶ್, ಯುವರಾಜ್, ಚೇತನ್ ಮುಂತಾದವರಿದ್ದರು.