14 ರಂದು ರಾಂ ಅಂಡ್ ಕೋ ಸರ್ಕಲ್ ಗೆಳೆಯರ ಬಳಗದಿಂದ ಹೋಳಿ

ದಾವಣಗೆರೆ, ಮಾ. 10- ನಗರದ ರಾಂ ಅಂಡ್ ಕೋ ಸರ್ಕಲ್ ಗೆಳೆಯರ ಬಳಗದ ವತಿಯಿಂದ ಇದೇ ದಿನಾಂಕ 14 ರ ಶುಕ್ರವಾರ ಬೆಳಿಗ್ಗೆ 7ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಹೋಳಿ ಆಚರಿಸಲಾಗುವುದು ಎಂದು ಶ್ರೀ ವರಸಿದ್ಧಿ ವಿನಾಯಕ ಮಹೋತ್ಸವ ಸಮಿತಿ ಅಧ್ಯಕ್ಷ ಕೆ. ನಾಗೇಂದ್ರ ರೆಡ್ಡಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಹೋಳಿ ಹಬ್ಬದ ಪ್ರಯುಕ್ತ ದಿನಾಂಕ 13 ರಂದು ಸಂಜೆ 7 ಕ್ಕೆ ಕಾಮದಹನ ನಡೆಯಲಿದ್ದು, 14 ರಂದು ಬೆಳಿಗ್ಗೆ 7 ರಿಂದ ಮಧ್ಯಾಹ್ನ 1 ರ ವರೆಗೆ ಹೋಳಿಯನ್ನು ವಿಜೃಂಭಣೆಯಿಂದ ಆಚರಿಸಲಾಗುವುದು. ಎರಡು ಸಾವಿರ ಯುವಕರು, ಒಂದು ಸಾವಿರ ಯುವತಿಯರು ಹೋಳಿ ಸಂಭ್ರಮಾಚರಣೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದರು.

ಹೋಳಿ ಆಡಲು ಮಹಿಳೆಯರಿಗೆ ಪ್ರತ್ಯೇಕವಾಗಿ ಅವಕಾಶ ಕಲ್ಪಿಸಲಾಗು ವುದು. ಅತ್ಯಂತ ವಿಭಿನ್ನವಾಗಿ ಆಚರಿಸಲಾಗುವುದು. ಬೆಳಗಾವಿಯಿಂದ ಡಿಜೆ ತರಿಸಲಾಗುವುದು. ಕಾಮದಹನದ ಮಹತ್ವವನ್ನು ಡಿವಿಡಿಯಲ್ಲಿ ಪ್ರಸಾರ ಮಾಡಲಾಗುವುದು ಎಂದು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಅಭಿಷೇಕ್ ಬೇತೂರು, ಶಂಭು ಎಸ್. ಉರೇಕೊಂಡಿ, ಅವಿನಾಶ್ ಬಸವರಾಜ್, ಅಜಿತ್ ಆಲೂರು, ಸುಭಾಶ್ಚಂದ್ರ ಉಪಸ್ಥಿತರಿದ್ದರು.

error: Content is protected !!