ಕುಂಬಳೂರಿನಲ್ಲಿ ಇಂದು ಕಂಕಣಧಾರಣೆ, 16 ರಂದು ರಥೋತ್ಸವ

ಹರಿಹರ ತಾಲ್ಲೂಕು ಕುಂಬಳೂರು ಗ್ರಾಮದಲ್ಲಿ ಇಂದಿನಿಂದ ಇದೇ ದಿನಾಂಕ 16 ರವರೆಗೆ ಶ್ರೀ ಹನುಮಂತ ದೇವರ ರಥೋತ್ಸವ ದ ನಿಮಿತ್ಯ ವಿವಿಧ ಕಾರ್ಯಕ್ರಮಗಳು ಜರುಗಲಿವೆ.

ಇಂದು ರಾತ್ರಿ 9.30 ಕ್ಕೆ ಕಂಕಣಧಾರಣೆ ನಡೆಯಲಿದೆ. 12 ರಂದು ರಾತ್ರಿ 9.30 ಕ್ಕೆ ಗಿಣಿ ಉತ್ಸವ, 13 ರಂದು ರಾತ್ರಿ 9.30 ಕ್ಕೆ ಚಿಗರಿ ಉತ್ಸವ, 14 ರಂದು ರಾತ್ರಿ 9.30 ಕ್ಕೆ ಕುದುರೆ ಉತ್ಸವ, ರಾತ್ರಿ 12 ಕ್ಕೆ ರಥೋತ್ಸವದ ಕಳಸ ಸ್ಥಾಪನೆ, 15 ರಂದು ಬೆಳಿಗ್ಗೆ 8.30 ಕ್ಕೆ ಆನೆ ಉತ್ಸವ, ಮಧ್ಯಾಹ್ನ 12 ಕ್ಕೆ ಹರಿಸೇವೆ ಭಕ್ತಾದಿಗಳ ಹರಕೆ, ಬಾಯಿಬೀಗ, ಕಿವಿ ಚುಚ್ಚುವುದು, ಜವಳ, ದಿಂಡು ಉರುಳುವುದು, ವಿವಿಧ ಹರಕೆಗಳು ನಡೆಯಲಿವೆ. ಮಧ್ಯಾಹ್ನ 3 ಕ್ಕೆ `ಬ್ರಹ್ಮ ರಥೋತ್ಸವ’ ಜರುಗಲಿದೆ.

16 ರಂದು ಬೆಳಗಿನ ಜಾವ ನಿಟ್ಟೂರು ಗ್ರಾಮದ ಶ್ರೀ ಹನುಮಂತ ದೇವರ ಜೊತೆ ಹಾಗೂ ಕುಂಬಳೂರು ಶ್ರೀ ಬಸವೇಶ್ವರ ದೇವರು ಮತ್ತು ಶ್ರೀ ಬೀರಲಿಂಗೇಶ್ವರ ದೇವರುಗಳ ಜೊತೆಗೂಡಿ ಕುಂಬಳೂರು ಶ್ರೀ ಹನುಮಂತ ದೇವರ ರಥೋತ್ಸವ ಜರುಗಲಿದೆ. 

error: Content is protected !!