ರಾಣೇಬೆನ್ನೂರು, ಮಾ. 5- ನಗರದ ಬಿಎಜೆಎಸ್‌ಎಸ್ ಮಹಿಳಾ ಮಹಾವಿದ್ಯಾಲಯದ ಪ್ರಥಮ ವರ್ಷದ ವಿದ್ಯಾರ್ಥಿನಿ ಬಿ.ಕೆ. ಅರ್ಚನಾ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ ವಿಜಯಪುರ ಬಾಲ್ ಬ್ಯಾಡ್‌ಮಿಂಟನ್ ತಂಡಕ್ಕೆ ಆಗಿ ಆಯ್ಕೆಯಾಗಿದ್ದಾರೆ. ಇದೇ 27ರಿಂದ ತಮಿಳುನಾಡಿನ ಕರೈಕುಡಿಯ ಅಲಗಪ್ಪ ವಿವಿಯಲ್ಲಿ ಸ್ಪರ್ಧೆಗಳು ನಡೆಯಲಿವೆ. ವಿದ್ಯಾರ್ಥಿನಿಯ ಈ ಸಾಧನೆಗೆ ಸಂಸ್ಥೆಯ ಚೇರ್ಮನ್ ರುದ್ರಪ್ಪ ಎಂ. ಲಮಾಣಿ, ಕಾರ್ಯದರ್ಶಿ ಡಾ.ಆರ್.ಎಂ ಕುಬೇರಪ್ಪ ಮತ್ತಿತರರು ಅಭಿನಂದಿಸಿದ್ದಾರೆ.
ಬ್ಯಾಡ್‌ಮಿಂಟನ್: ವಿವಿ ತಂಡಕ್ಕೆ ಅರ್ಚನಾ
