ದಾವಣಗೆರೆ, ಫೆ. 27 – ಹರಿಯಾಣದ ನೆಟ್ ಬಾಲ್ ಅಸೋಸಿಯೇಷನ್ ಭಿವಾನಿಯ ಕಲ್ಲಿಂಗದಲ್ಲಿರುವ ಶ್ರೀ ಬಾಲಾಜಿ ಸೀನಿಯರ್ ಸೆಕೆಂಡರಿ ಶಾಲೆಯಲ್ಲಿ ಇಂದು ಮತ್ತು ನಾಳೆ ನಡೆಯಲಿರುವ 3ನೇ ಫಾಸ್ಟ್ 5 ಜ್ಯೂನಿಯರ್ ರಾಷ್ಟ್ರೀಯ ನೆಟ್ಬಾಲ್ ಚಾಂಪಿಯನ್ಶಿಪ್ (ಬಾಲಕರು ಮತ್ತು ಬಾಲಕಿಯರು) ಗೆ ದಾವಣಗೆರೆ ಜಿಲ್ಲಾ ನೆಟ್ ಬಾಲ್ ಸಂಸ್ಥೆಯಿಂದ ಬಾಲಕಿಯರ ತಂಡಕ್ಕೆ ಇಬ್ಬರು ಆಯ್ಕೆಯಾಗಿದ್ದಾರೆ. ಎ.ಪಿ. ಲಕ್ಷ್ಮಿ ಹಾಗೂ ಕೆ.ಪಿ. ಸಾನ್ವಿ ಆಯ್ಕೆಯಾಗಿದ್ದಾರೆ. ಲಕ್ಷ್ಮಿ, ಕೆ. ಪ್ರಕಾಶ್ ಮತ್ತು ಟಿ. ನೇತ್ರಾವತಿ ದಂಪತಿ ಪುತ್ರಿ ಹಾಗೂ ಸಾನ್ವಿ, ಕೆ. ಹೆಚ್. ಪ್ರಶಾಂತ್ ಮತ್ತು ಕೆ.ಎನ್. ರೇಖಾ ದಂಪತಿ ಪುತ್ರಿ. ಇಬ್ಬರಿಗೂ ಜಿಲ್ಲಾ ನೆಟ್ ಬಾಲ್ ಸಂಸ್ಥೆಯ ಕಾರ್ಯದರ್ಶಿ ಆರ್. ವೀರೇಶ್, ತರಬೇತುದಾರರು ಆರ್. ದರ್ಶನ್ ಶುಭ ಕೋರಿದ್ದಾರೆ.
ಹರಿಯಾಣದ ರಾಷ್ಟ್ರಮಟ್ಟದ ಫಾಸ್ಟ್ 5 ನೆಟ್ ಬಾಲ್ ತಂಡಕ್ಕೆ ನಗರದ ಇಬ್ಬರು ಆಟಗಾರರು ಆಯ್ಕೆ
