ಫ್ಲೆಕ್ಸ್‌ ರಹಿತ ಕೊಟ್ಟೂರು ಜಾತ್ರೆ

ಮಾನ್ಯರೇ,

ಉತ್ತರ ಕರ್ನಾಟಕದ ಪ್ರಮುಖ ಜಾತ್ರೆಗಳಲ್ಲೊಂದಾದ    ಶ್ರೀ ಗುರು ಬಸವೇಶ್ವರರ ರಥೋತ್ಸವಕ್ಕೆ   ಪಾದಯಾತ್ರೆಯ ಮೂಲಕ ಕೊಟ್ಟೂರು ಪಟ್ಟಣವನ್ನು ಪ್ರವೇಶಿಸುತ್ತಿದ್ದಂತೆ, ಕೊಂಚ  ಗಲಿಬಿಲಿಗೊಂಡಿದ್ದಂತೂ ನಿಜ. ಯಾಕೆಂದರೆ, ಅಲ್ಲಿ ಜಾತ್ರೆಗೆ ಬರುವಂತಹ ಭಕ್ತಾದಿಗಳಿಗೆ ಶುಭಾಶಯ ಕೋರುವಂತಹ ಯಾವುದೇ ರೀತಿಯ ಫ್ಲೆಕ್ಸ್ ಗಳು ಕಾಣಲಿಲ್ಲ.!

ಈ ಬೆಳವಣಿಗೆಯಿಂದ  ಸಹಜವಾಗಿಯೇ ನನಗೆ ಖುಷಿ ಎನಿಸಿತು. ನಾ ಕಂಡಂತೆ ಪ್ರತಿ ವರ್ಷವೂ, ರಸ್ತೆಯ ಬದಿಗಳಲ್ಲಿ ಶಾಸಕರು, ಸಂಸದರು, ಸಮಾಜ ಸೇವಕರು, ರಾಜಕೀಯ ಮುಖಂಡರು ಮತ್ತು ಪ್ರಚಾರ ಪ್ರಿಯರ ಪ್ಲೆಕ್ಸ್‌ಗಳೇ ಎಲ್ಲೆಡೆ ರಾರಾಜಿಸುತ್ತಿದ್ದವು. ಪ್ಲೆಕ್ಸ್ ಗಳ ಹಾವಳಿಯಿಂದಾಗಿ ಸಹಜವಾಗಿಯೇ  ಜಾತ್ರೆಯ ಪ್ರಕೃತಿ-ಸೌಂದರ್ಯದ ಸೊಬಗಿಗೆ ಕಿರಿಕಿರಿ ಎನಿಸುತ್ತಿತ್ತು. ಮಿತಿಮೀರಿದ ಪ್ಲೆಕ್ಸ್‌ಗಳ  ಹಾವಳಿಯಿಂದಾಗಿ, ಪರಿಸರಕ್ಕೂ ಧಕ್ಕೆಯಾಗುತ್ತಿತ್ತು. ಆದರೆ ಈ ಬಾರಿಯಿಂದ ಫ್ಲೆಕ್ಸ್ ಗಳ ಹಾವಳಿಗೆ ಕಡಿವಾಣ ಹಾಕಿರುವುದು ನಿಜಕ್ಕೂ ಸಂತೋಷದಾಯಕ ವಿಷಯ.    

                                                          – ಮುರುಗೇಶ ಡಿ, ದಾವಣಗೆರೆ.

error: Content is protected !!