ಶ್ರೀ ಮಾರ್ಕಂಡೇಶ್ವರ ಪದ್ಮಶಾಲಿ ಸಮಾಜದ ವತಿಯಿಂದ ಮಹಾಶಿವರಾತ್ರಿ ಪ್ರಯುಕ್ತ ಇಂದು ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಶ್ರೀ ಮಾರ್ಕಂಡೇಶ್ವರ ಪದ್ಮಶಾಲಿ ಸಮಾಜ ಸೇವಾ ಸಂಘದ ಅಧ್ಯಕ್ಷ ಎಸ್.ಟಿ.ಪಿ. ತಿಪ್ಪೇಶ್, ಪ್ರಧಾನ ಕಾರ್ಯದರ್ಶಿ ವಿ.ಎಸ್.ಪರಶುರಾಮ್ ತಿಳಿಸಿದ್ದಾರೆ.
ಇಂದು ಬೆಳಿಗ್ಗೆ 9.30 ಕ್ಕೆ ಶ್ರೀ ಸ್ವಾಮಿಯ ಬೆಳ್ಳಿ ರಥೋತ್ಸವ ಜರುಗಲಿ ದ್ದು, ತುಮ್ಮಿನಕಟ್ಟೆಯ ಶ್ರೀ ಪ್ರಭುಲಿಂಗ ಸ್ವಾಮೀಜಿ ಪೂಜೆ ನೆರವೇರಿಸಲಿದ್ದಾರೆ. ಎಸ್ಕೆಪಿ ರಸ್ತೆಯಿಂದ ಪ್ರಾರಂಭವಾಗುವ ರಥೋತ್ಸವ ದೊಡ್ಡಪೇಟೆ, ಬಿ.ಎಸ್. ಚನ್ಬಬಸಪ್ಪ ಬಟ್ಟೆ ಅಂಗಡಿ ರಸ್ತೆ, ಹಾಸಬಾವಿ ಸರ್ಕಲ್, ಗಡಿಯಾರ ಕಂಬದ ರಸ್ತೆ, ಕಾಯಿಪೇಟೆ, ಹೊಂಡದ ಸರ್ಕಲ್ ಮೂಲಕ ದೇವವಸ್ಥಾನ ತಲುಪಲಿದೆ. ನಂತರ ಅನ್ನ ಸಂತರ್ಪಣೆ ಏರ್ಪಡಿಸಲಾಗಿದೆ.