ದೇಶದಲ್ಲಿ ಮೌಢ್ಯ ಮುಕ್ತಿಯಾಗಿಲ್ಲ

ದೇಶದಲ್ಲಿ ಮೌಢ್ಯ ಮುಕ್ತಿಯಾಗಿಲ್ಲ

ದಾವಣಗೆರೆ, ಫೆ. 23 – ದೇಶವು ಮೌಢ್ಯತನದಿಂದ ಇಂದಿಗೂ ಮುಕ್ತವಾಗಿಲ್ಲ ಎಂದು ವೈಜ್ಞಾನಿಕ ಚಿಂತಕ ನರೇಂದ್ರ ನಾಯಕ್‌ ಬೇಸರ ವ್ಯಕ್ತಪಡಿಸಿದರು.

ಬ್ರೇಕ್‌ ಥ್ರೂ ಸೈನ್ಸ್ ಸೊಸೈಟಿ ಹಾಗೂ ಎಐಡಿವೈಓ ಯುವಜನ ಸಂಘಟನೆ ವತಿಯಿಂದ ನಗರದ ಡಿಆರ್ಆರ್‌ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಈಚೆಗೆ ನಡೆದ ಪವಾಡ ರಹಸ್ಯ ಬಯಲು ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಹಲವು ಪ್ರಯೋಗವನ್ನು ಹಾಗೂ ನೈಜ ಘಟನೆಗಳನ್ನು ವಿವರಿಸಿದ ಅವರು, ಪ್ರತಿಯೊಬ್ಬರು ವೈಜ್ಞಾನಿಕ ಮನೋಭಾವ ಹಾಗೂ ಚಿಂತನೆ ಯನ್ನು ಜೀವನದಲ್ಲಿ ಅಳವಡಿಸಿ ಕೊಳ್ಳಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಭಾಗಿ ಯಾಗಿದ್ದ ವಿದ್ಯಾರ್ಥಿಗಳ ಪ್ರಶ್ನೆಗಳಿಗೆ ಉತ್ತರಿಸಿ, ವಿಜ್ಞಾನದ ಅಳವಡಿಕೆ ಯಿಂದ  ಹಲವು ದೇಶಗಳಲ್ಲಿ ಆಗು ತ್ತಿರುವ ಪ್ರಗತಿಯ ಬಗ್ಗೆ ವಿವರಿಸಿದರು.

ಸೊಸೈಟಿಯ ಡಾ. ವಸುಧೇಂದ್ರ ಮಾತನಾಡಿ, ಇಂತಹ ಕಾರ್ಯ ಕ್ರಮಗಳು ಗ್ರಾಮೀಣ ಪ್ರದೇಶದಲ್ಲಿ ಹೆಚ್ಚಾಗಿ ನಡೆದರೆ, ಅಲ್ಲಿನ ತಪ್ಪು ಪದ್ಧತಿಗಳು ಹಾಗೂ ಮೌಢ್ಯದ ಆಚರಣೆ ದೂರವಾಗಲಿದೆ ಎಂದು ಆಶಯ ವ್ಯಕ್ತಪಡಿಸಿದರು.

ಈ ವೇಳೆ ಪರಶುರಾಮ್, ಮಂಜುನಾಥ್, ಸಂಘಟನೆ ಸದಸ್ಯ ರಾದ ಗುರು, ಅನಿಲ್, ಕಾಲೇಜಿನ ಸಿಬ್ಬಂದಿ ಹಾಗೂ ಇತರರು ಇದ್ದರು.

error: Content is protected !!