ಕೆಪಿಸಿಸಿ ಎಸ್.ಟಿ. ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ.ಡಿ.ಕೀರ್ತಿಕುಮಾರ್
ಜಗಳೂರು, ಫೆ. 24 – ನಿರಂತರ ಕಠಿಣ ಪರಿಶ್ರಮದಿಂದ ದೇಹದಾರ್ಢ್ಯತೆ ಗಳಿಸಲು ಸಾಧ್ಯ ಎಂದು ಕೆಪಿಸಿಸಿ ಎಸ್.ಟಿ. ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ.ಡಿ.ಕೀರ್ತಿಕುಮಾರ್ ಅಭಿಪ್ರಾಯ ವ್ಯಕ್ತಪಡಿಸಿದರು.
ಪಟ್ಟಣದ ಬಯಲು ರಂಗಮಂದಿರದಲ್ಲಿ ಕಮಾಂಡೋ ಮಲ್ಟಿ ಜಿಮ್ ಮತ್ತು ಜಗಳೂರು ಫ್ರೆಂಡ್ಸ್ ಗ್ರೂಪ್ ವತಿಯಿಂದ ಆಯೋಜಿಸ ಲಾಗಿದ್ದ ದ್ವಿತೀಯ ಬಾರಿಗೆ ಅಂತರ್ ಜಿಲ್ಲಾ ಮಟ್ಟದ ದೇಹದಾರ್ಢ್ಯ ಸ್ಪರ್ಧೆ, ಎತ್ತರ ವಿಭಾಗ, ಮಿಸ್ಟರ್ ಜಗಳೂರು ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸ್ಪರ್ಧೆಯಲ್ಲಿ ಗೆಲುವಿಗಿಂತ ಭಾಗವಹಿಸುವುದು ಮುಖ್ಯ. ಪ್ರತಿಯೊಬ್ಬ ಪಟುವಿನ ಪ್ರದರ್ಶನಗಳು ರೋಮಾಂಚನಕಾರಿಯಾಗಿವೆ.ದೇಹದಾರ್ಢ್ಯತೆ ಪ್ರದರ್ಶನಕ್ಕೆ ಸಿಕ್ಕ ಒಂದೇ ನಿಮಿಷದಲ್ಲಿ ಅವರು ಶಕ್ತಿಮೀರಿ ಮೈನವಿವರೇಳಿಸಿ ವಿವಿಧ ಭಂಗಿಗಳನ್ನು ಪ್ರದರ್ಶಿಸಿ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಕೆಪಿಸಿಸಿ ಎಸ್.ಟಿ. ಘಟಕದ ಮಾಜಿ ರಾಜ್ಯಾಧ್ಯಕ್ಷ ಕೆ.ಪಿ.ಪಾಲಯ್ಯ ಮಾತನಾಡಿ, ಬರ ಮತ್ತು ಬಡ ತಾಲ್ಲೂಕಿನಲ್ಲಿ ಎರಡನೇ ಬಾರಿಗೆ ದೇಹದಾರ್ಢ್ಯ ಸ್ಪರ್ಧೆ ಆಯೋಜನೆ ಸಂತಸದ ಸಂಗತಿ, ಅತ್ಯುತ್ತಮವಾಗಿ ತರಬೇತಿ ಪಡೆದ ಪಟುಗಳು ರಾಜ್ಯದ ಮೂಲೆ ಮೂಲೆಗಳಿಂದ ಭಾಗವಹಿಸಿರುವುದು ಸ್ವಾಗತಾರ್ಹ. ಈ ಮೂಲಕ ಜಗಳೂರಿನ ಕ್ರೀಡಾಸಕ್ತಿಯ ಕೀರ್ತಿ ರಾಜ್ಯ ವ್ಯಾಪಿ ಪಸರಿಸಲಿ ಎಂದು ಶುಭ ಕೋರಿದರು.
ಸಂದರ್ಭದಲ್ಲಿ ಕಮಾಂಡೋ ಮಲ್ಟಿ ಜಿಮ್ ಮಾಲೀಕ ಜಾಕಿ ಪ್ರಕಾಶ್, ಬಿಜೆಪಿ ಯುವ ಮುಖಂಡ ಬಿಸ್ತುವಳ್ಳಿ ಬಾಬು, ಪಿಂಜಾರ ಸಮಾಜದ ತಾಲೂಕು ಅಧ್ಯಕ್ಷ ಬಂಗ್ಲೆ ಫರ್ವೀಜ್, ಜೈಭಾರತ್ ಟ್ರಸ್ಟ್ ಮುಖ್ಯಸ್ಥ ಬರ್ಕತ್ ಅಲಿ, ವಾಸೀಂ, ಜಿಮ್ ಟ್ರೈನರ್ಗಳಾದ ಅಶೋಕ್, ಪ್ರವೀಣ್ ಕುಮಾರ್, ದೇಹದಾರ್ಢ್ಯ ಸ್ಪರ್ಧೆ ರಾಜ್ಯಮಟ್ಟದ ವಿಜೇತ ಶಿಕ್ಷಕ ಓಬಳೇಶ್, ಮುಖಂಡರಾದ ಬಿ.ಲೋಕೇಶ್, ಎನ್.ಎಚ್.ರಮೇಶ್, ಸಂತೋಷ್ ಕುಮಾರ್, ಕೆಳಗೋಟೆ ಜಗದೀಶ್, ಮಾರುತಿ, ಮಂಜುನಾಥ್, ಆದರ್ಶ, ಎಲ್ಲಪ್ಪ, ಪೈಲ್ವಾನ್ ಮಾರಪ್ಪ, ಕೇಶವ, ರತನ್, ಸಂತೋಷ್ ನಾಯ್ಕ ಸೇರಿದಂತೆ ಇತರರು ಭಾಗವಹಿಸಿದ್ದರು.