ಹೊನ್ನಾಳಿ ತಾಲ್ಲೂಕು ಪಂಚಮಸಾಲಿ ನೌಕರ ಸಂಘದ ಅಧ್ಯಕ್ಷರಾಗಿ ಅಶೋಕ ಆಯ್ಕೆ

ಹೊನ್ನಾಳಿ ತಾಲ್ಲೂಕು ಪಂಚಮಸಾಲಿ ನೌಕರ ಸಂಘದ ಅಧ್ಯಕ್ಷರಾಗಿ ಅಶೋಕ ಆಯ್ಕೆ

ಹೊನ್ನಾಳಿ, ಫೆ.18- ತಾಲ್ಲೂಕಿನ ಪಂಚಮಸಾಲಿ ಸಮಾಜದ ನೌಕರರ ಘಟಕದ ಅಧ್ಯಕ್ಷರಾಗಿ ಒಡೆಯರ ಹತ್ತೂರ ಹೆಚ್‌.ಬಿ. ಅಶೋಕ ಆಯ್ಕೆಯಾಗಿದ್ದಾರೆ.

ಜಿ.ದೊಡ್ಡಪ್ಪ ಇವರ ರಾಜೀನಾಮೆಯಿಂದ  ತೆರವಾದ ಸ್ಥಾನಕ್ಕೆ ಪಟ್ಟಣದ ವೀರಭದ್ರೇಶ್ವರ ದೇವಸ್ಥಾನದಲ್ಲಿ ಪಂಚಮಸಾಲಿ ಸಮಾಜದ ಅಧ್ಯಕ್ಷ ಬೆನಕನಹಳ್ಳಿ ವೀರಣ್ಣ ಇವರ ಅಧ್ಯಕ್ಷತೆಯಲ್ಲಿ ನಡೆದ ಪಂಚಮಸಾಲಿ ಸಮಾಜದ ಹಾಗೂ ನೌಕರರ ಸಂಘದ ಪದಾಧಿಕಾರಿಗಳ ಸಭೆಯಲ್ಲಿ ಆಯ್ಕೆ ಮಾಡಲಾಗಿದೆ.

ಈ ಸಂದರ್ಭದಲ್ಲಿ ಹರಿಹರ ಪೀಠದ ಆಡಳಿತಾಧಿಕಾರಿ  ಡಾ.ರಾಜಕುಮಾರ, ಜಿಲ್ಲಾ ನೌಕರರ ಸಂಘದ ಅಧ್ಯಕ್ಷ ಶ್ರೀಧರ, ದಾವಣಗೆರೆ ಸಮಾಜದ ಮುಖಂಡರಾದ  ಮಲ್ಲಿನಾಥ, ವಿಶ್ವನಾಥ, ನಿಂಗಪ್ಪ, ಬಾದಾಮಿ ಚಂದ್ರಶೇಖರ,  ಹೊನ್ನಾಳಿ ನೌಕರರ ಸಂಘದ ಪದಾಧಿಕಾರಿಗಳಾದ ಜಿ.ದೊಪ್ಪಪ್ಪ, ವೀರೇಶಪ್ಪ, ದೀಪಕ್, ಹಾಲಸ್ವಾಮಿ, ಪ್ರಸನ್ನ, ರಮೇಶ, ಮಹಂತೇಶ, ಪ್ರಭು, ಸತೀಶ, ವಿಜಯ ಸೇರಿದಂತೆ, ಇನ್ನಿತರರಿದ್ದರು.

error: Content is protected !!