ಹರಿಹರ,ಫೆ. 18- ಇದೇ ದಿನಾಂಕ 22 ರಂದು ಜರುಗಲಿರುವ ಶ್ರೀ ಕೊಟ್ಟೂರು ಗುರುಬಸವೇಶ್ವರ ರಥೋತ್ಸವದ ಅಂಗವಾಗಿ ನಗರದ ಶ್ರೀ ಗುರು ಕೊಟ್ಟೂರು ಗುರುಬಸವೇಶ್ವರ ದೇವಸ್ಥಾನ ನಿರ್ಮಾಣ ಸಮಿತಿ ಹಾಗೂ ಶ್ರೀ ಗುರು ಕೊಟ್ಟೂರೇಶ್ವರ ಪಾದಯಾತ್ರೆ ಸೇವಾ ಸಮಿತಿ ಇವರ ಸಂಯುಕ್ತ ಆಶ್ರಯದಲ್ಲಿ 9ನೇ ವರ್ಷದ ಕೊಟ್ಟೂರು ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ.
ನಾಳೆ 19ರ ಬುಧವಾರ ನಗರದ ಹರಿಹರೇಶ್ವರ ದೇವಸ್ಥಾನದ ರಸ್ತೆಯಲ್ಲಿರುವ ಶ್ರೀ ರೇಣುಕ ಮಂದಿರದಿಂದ ಪಾದಯಾತ್ರೆಗೆ ಚಾಲನೆ ನೀಡಲಾಗು ವುದು. ಮಧ್ಯಾಹ್ನ 12ರಿಂದ ಜೀಜಾ ಮಾತಾ ಕಾಲೋನಿ ಯಲ್ಲಿರುವ ಶ್ರೀ ಗುರು ಕೊಟ್ಟೂರೇ ಶ್ವರ ದೇವಸ್ಥಾನದಲ್ಲಿ ಪಾದಯಾತ್ರಿ ಗಳಿಗೆ ಬೀಳ್ಕೊಡುಗೆ ಸಮಾ ರಂಭ ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮದ ಸಾನ್ನಿಧ್ಯ ವನ್ನು ಆವರಗೊಳ್ಳ ಶ್ರೀ ಓಂಕಾರ ಶಿವಾಚಾರ್ಯ ಸ್ವಾಮೀಜಿ, ನೀಲಗುಂದ ಜಂಗಮಪೀಠ ಗುಡ್ಡದ ಸಂಸ್ಥಾನದ ಶ್ರೀ ಚನ್ನಬಸವ ಶಿವಯೋಗಿ ಸ್ವಾಮೀಜಿ ವಹಿಸಲಿ ದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಮಿತಿ ಗೌರವಾಧ್ಯಕ್ಷ ವೀರಯ್ಯ ಗಜಾಪುರ ವಹಿಸುವರು.
ಅಧ್ಯಕ್ಷ ಜಿ. ಮಂಜುನಾಥ, ಶಾಸಕ ಬಿ. ಪಿ. ಹರೀಶ್, ಮಾಜಿ ಶಾಸಕ ಹೆಚ್. ಎಸ್. ಶಿವಶಂಕರ್, ಎಸ್. ರಾಮಪ್ಪ, ಎಸ್. ಎಂ. ವೀರೇಶ್, ಎಂ. ನಾಗೇಂದ್ರಪ್ಪ, ಚಂದ್ರಶೇಖರ ಪೂಜಾರ, ಎನ್.ಹೆಚ್.ಶ್ರೀನಿವಾಸ, ಮಹೇಶ್ವರಪ್ಪ ದೀಟೂರು, ನಗರಸಭೆ ಉಪಾಧ್ಯಕ್ಷ ಜಂಬಣ್ಣ. ಸದಸ್ಯರಾದ ಶಂಕರ್ ಖಟಾವ್ಕರ್, ಸಿದ್ದೇಶ್ ಕೆ.ಜಿ, ಆಟೋ ಹನುಮಂತ. ರಜನಿಕಾಂತ್ ಎನ್. ಡಿ.ಜಿ. ರಘುನಾಥ, ಎಂ. ವಿಲಾಸ ಗೌಡ್ರು, ನಿಟ್ಟೂರು.ಭಾಗವಹಿಸಲಿದ್ದಾರೆ.