ಹರಿಹರ, ಫೆ. 16 – ನಗರದ ಹೊರವಲಯದ ಬನ್ನಿಕೋಡು ಗ್ರಾಮದ ಶಶಿಕಲಾ ರಮೇಶ್ ಎಂಬುವವರ ಮನೆಯಲ್ಲಿನ ಹಣಕಾಸಿನ ಸಮಸ್ಯೆಯನ್ನು ಪರಿಹರಿಸಲಿಕ್ಕೆ ಪೂಜೆ ಮಾಡುತ್ತೇವೆ ಎಂದು ಹೇಳಿಕೊಂಡು ದಿನಾಂಕ 11 ರಂದು ಇಸ್ಮಾಯಿಲ್, ಜಬೀವುಲ್ಲಾ, ಹಾಗೂ ರುಕ್ಸಾನ ಬೇಗಂ ಎಂಬುವವರು ಮನೆಯಲ್ಲಿ ಇದ್ದವರನ್ನು ನಂಬಿಸಿ 1.44 ಲಕ್ಷ ರೂ. ವೆಚ್ಚದ 2 ತೊಲ ಬಂಗಾರದ ಆಭರಣಗಳನ್ನು ದೋಚಿಕೊಂಡು ಹೋಗಿದ್ದಾರೆ.
ಬನ್ನಿಕೋಡು ಗ್ರಾಮದ ಶಶಿಕಲಾ ರಮೇಶ್ ಅವರು ಗ್ರಾಮಾಂತರ ಗುತ್ತೂರು ಪೊಲೀಸ್ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿದ ಪರಿಣಾಮ ಸಿಬ್ಬಂದಿಗಳನ್ನೊಳಗೊಳಗೊಂಡ ತಂಡವು ಪತ್ತೆ ಕಾರ್ಯಾಚರಣೆ ನಡೆಸಿ ಆರೋಪಿತರಾದ ದಾವಣಗೆರೆ ಭಾಷಾನಗರ ನಿವಾಸಿ ಎಲೆಕ್ಟ್ರೀಷಿಯನ್ ಇಸ್ಮಾಯಿಲ್, ಜಬೀವುಲ್ಲಾ, ಭಗತ್ ಸಿಂಗ್ ಪುರ ಓಡಿಸ್ಸಾ ಟೈಲರ್ ರುಕ್ಸಾನ ಬೇಗಂ ಕೋಂ ಜಲಾಲುದ್ದೀನ್ ಅವರನ್ನು ಬಂಧಿಸಿದ್ದಾರೆ. ಹರಿಹರ ಗ್ರಾಮಾಂತರ ಪೊಲೀಸ್ ಠಾಣೆಯ 2 ಪ್ರಕರಣಗಳು ಮತ್ತು ಆಜಾದ್ ನಗರ ಠಾಣೆಯ 1 ಪ್ರಕರಣ ಪತ್ತೆಯಾಗಿದ್ದು, ಬಂಧಿತರಿಂದ 8,65,000 ಸಾವಿರ ರೂ. ಮೌಲ್ಯದ 90 ಗ್ರಾಂ ತೂಕದ ಬಂಗಾರದ ಆಭರಣಗಳು ಹಾಗೂ 750 ಗ್ರಾಂ ತೂಕದ ಬೆಳ್ಳಿಯ ಸಾಮಾನುಗಳನ್ನು ವಶಪಡಿಸಿಕೊಂಡಿದ್ದು ಆರೋಪಿತರನ್ನು ಬಂಧಿಸಿದ್ದಾರೆ.
ದಾವಣಗೆರೆ ಗ್ರಾಮಾಂತರ ಡಿವೈಎಸ್ಪಿ ಬಿ.ಎಸ್. ಬಸವರಾಜ್ ವೃತ್ತ ನಿರೀಕ್ಷಕ ಸುರೇಶ ಸಗರಿ, ಗುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯ ಪಿಎಸ್ಐ ಮಂಜುನಾಥ ಎಸ್. ಕುಪ್ಪೇಲೂರು, ಪಿಎಸ್ಐ ಮಹದೇವ ಸಿದ್ದಪ್ಪ ಭತ್ತೆ, ಸಿಬ್ಬಂದಿಗಳಾದ ತಿಪ್ಪೇಸ್ವಾಮಿ, ಜಿ.ಎನ್. ರಮೇಶ, ನೀಲಮೂರ್ತಿ, ದಾದಾಪೀರ್, ಅನಿಲ್ ಕುಮಾರ್, ಬಸವನಗೌಡ, ಲಿಂಗರಾಜ್, ಕರಿಯಪ್ಪ, ಸತೀಶ್ ಟಿ.ವಿ, ರಿಜ್ವಾನ್ ನಾಸೂರ್, ಗಂಗಾಧರ, ಸುರೇಶ ಉಪ್ಪಾರ, ಪ್ರಸನ್ನಕಾಂತ, ಅನಿಲ್ ಕುಮಾರ್ ನಾಯ್ಕ್, ಕಡೇಮನಿ ನಾಗಪ್ಪ, ಅರ್ಜುನ್ ನಂದ್ಯಾಲ, ಶ್ರೀಮತಿ ಸಿ.ಎಂ. ಸುಶೀಲ, ನಾಜೀಮಾ, ಪವಿತ್ರ, ಸಿದ್ದಪ್ಪ ಅವರನ್ನೊಳಗೊಂಡ ತಂಡವನ್ನು ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಶ್ರೀಮತಿ ಉಮಾ ಪ್ರಶಾಂತ್ ಶ್ಲ್ಯಾಘಿಸಿದ್ದಾರೆ.