ಯುಜಿಸಿ ಕರಡು ನಿಯಮಾವಳಿ ಕೂಡಲೇ ಹಿಂಪಡೆಯಲು ಎಐಡಿಎಸ್ಓ ಆಗ್ರಹ

ದಾವಣಗೆರೆ, ಫೆ.10- ಇತ್ತೀಚೆಗೆ ರೂಪಿಸಲಾಗಿರುವ ಯುಜಿಸಿ 2025 ಕರಡು ನಿಯಮಾವಳಿಗಳು ಶಿಕ್ಷಣ ವಿರೋಧಿ, ಜನ ವಿರೋಧಿ ಹಾಗೂ ಅಪ್ರಜಾತಾಂತ್ರಿಕವಾಗಿವೆ ಎಂದು ಎಐಡಿಎಸ್ಓ  ಟೀಕಿಸಿದೆ.  

ಶಿಕ್ಷಣ ಕ್ಷೇತ್ರದ ಹೊರಗಿನವರನ್ನು ವಿಶ್ವವಿದ್ಯಾಲಯಗಳ ಕುಲಪತಿಗಳನ್ನಾಗಿ ಮಾಡುವ ಅಪಾಯಕಾರಿ ನಿಯಮಗಳನ್ನು ಯುಜಿಸಿ  ರೂಪಿಸಿದೆ. ಉದ್ಯಮ, ಸಾರ್ವಜನಿಕ ಆಡಳಿತ, ನೀತಿ ನಿರೂಪಣೆ ಅಥವಾ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳ ಹಿರಿಯ ಅಧಿಕಾರಿ ಹುದ್ದೆಯಲ್ಲಿ ಕನಿಷ್ಠ 10 ವರ್ಷ ಅನುಭವದ ಜೊತೆಗೆ ಶೈಕ್ಷಣಿಕವಾಗಿ ಮಹತ್ವದ ಕೊಡುಗೆ ನೀಡಿದವರನ್ನು ವಿಶ್ವವಿದ್ಯಾಲಯದ ಕುಲಪತಿಯನ್ನಾಗಿ ಮಾಡಬಹುದು ಎಂದು ಹೇಳಲಾಗಿದೆ. 

ಎಂ.ಇ ಅಥವಾ ಎಂ.ಟೆಕ್ ನಲ್ಲಿ ಕನಿಷ್ಠ ಶೇಕಡ 55 ಅಂಕ ಪಡೆದವರಿಗೆ ರಾಷ್ಟ್ರೀಯ ಅರ್ಹತಾ ಪರೀಕ್ಷೆಯಿಂದ ವಿನಾಯಿತಿ ನೀಡಿ ನೇರವಾಗಿ ಸಹಾಯಕ ಪ್ರಾಧ್ಯಾಪಕ ಹುದ್ದೆಗೆ ನೇಮಕ ಮಾಡುವ ನಿಯಮವನ್ನು ಕೂಡ ಕರಡಿನಲ್ಲಿ ಸೂಚಿಸಲಾಗಿದೆ.  ಕೂಡಲೇ ಈ ಕರಡನ್ನು ಹಿಂಪಡೆಯಬೇಕು ಎಂದು ಎಐಡಿಎಸ್ಓ ಆಗ್ರಹಿಸಿದೆ.

error: Content is protected !!