ರಾಣೇಬೆನ್ನೂರಿನಲ್ಲಿ ಫುಟ್‌ಪಾತ್ ಅಂಗಡಿಗಳ ತೆರವು

ರಾಣೇಬೆನ್ನೂರಿನಲ್ಲಿ ಫುಟ್‌ಪಾತ್ ಅಂಗಡಿಗಳ ತೆರವು

ರಾಣೇಬೆನ್ನೂರು,ಫೆ.8- ನಗರದ ಹಳೇ ಪಿ.ಬಿ.ರಸ್ತೆಯ ಪಂಚಮುಖಿ ಆಂಜನೇಯ ದೇವಸ್ಥಾನ ಕ್ರಾಸ್‍ಬಳಿ ಫುಟ್‌ಪಾತ್‍ನಲ್ಲಿರುವ ಅನಧಿಕೃತ  ಶೆಡ್ ಅಂಗಡಿಗಳನ್ನು   ನಗರಸಭೆ ಪೌರಾಯುಕ್ತ ಪಕ್ಕೀರಪ್ಪ ಇಂಗಳಗಿ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ ತೆರವುಗೊಳಿಸಲಾಯಿತು.

ಈ ಕುರಿತು ಪೌರಾಯುಕ್ತ ಪಕ್ಕೀರಪ್ಪ ಇಂಗಳಗಿ ಮಾತನಾಡಿ, ಫುಟ್‍ಪಾತ್ ಒತ್ತುವರಿ ಮಾಡಿಕೊಂಡಿ ರುವುದರಿಂದ ಸಾರ್ವಜನಿಕರು ರಸ್ತೆ ಮೇಲೆ ನಡೆದುಕೊಂಡು ಸಾಗಬೇಕಾದ ಅನಿವಾರ್ಯ ಪರಿಸ್ಥಿತಿ ತಲೆದೋರಿದೆ.
ಇದರಿಂದ ಅಪಘಾತಗಳು ಸಂಭವಿಸುವ ಸಾಧ್ಯವಿರುವುದ ರಿಂದ ಸಾರ್ವಜನಿಕರ ಪ್ರಾಣ ಹಾನಿ ತಪ್ಪಿಸುವ ನಿಟ್ಟಿನಲ್ಲಿ ಅಂಗಡಿ
ಮಾಲೀಕರಿಗೆ ಅರಿವು ಮೂಡಿಸುವ ಕೆಲಸ ಮಾಡಲಾಗಿತ್ತು. 

ರಸ್ತೆಯ ಫುಟ್‍ಪಾತ್‍ನಲ್ಲಿ ಖಾಯಂ ಶೆಡ್ ನಿರ್ಮಾಣ ಮಾಡಿ ಸರಿಯಾಗಿ ಸ್ವಚ್ಚತೆ ಮಾಡಿಕೊಳ್ಳದ ಕಾರಣ ಅವರಿಗೆ ಸಾಕಷ್ಟು ಬಾರಿ ನೋಟಿಸ್ ನೀಡಿ ಎಚ್ಚರಿಸಲಾಯಿತು. ಆದರೆ ಶೆಡ್ ಮಾಲೀಕರು ಇದಕ್ಕೆ ಸ್ಪಂದಿಸಿದ ಕಾರಣ ಶೆಡ್‍ಗಳನ್ನು ತೆರವುಗೊಳಿಸಲಾಗಿದೆ. ಮುಂದಿನ ದಿನಗಳಲ್ಲಿ ಅಕ್ರಮವಾಗಿ ಫುಟ್‍ಪಾತ್ ಒತ್ತುವರಿ ಮಾಡಿಕೊಂಡರೆ  ದಂಡ ಹಾಕಲಾಗುವುದು ಎಂದರು.

ನಗರದ ಪ್ರಮುಖ ರಸ್ತೆಗಳಲ್ಲಿರುವ ಬೇಕರಿ, ಬಿರಿಯಾನಿ, ಬಟ್ಟೆ ಅಂಗಡಿ ಮಾಲೀಕರಿಗೆ ತಿಳಿವಳಿಕೆ ನೀಡಿ ಸಾರ್ವಜನಿಕರಿಗೆ ತೊಂದರೆ ನೀಡಬೇಡಿ, ಸಾರ್ವಜನಿಕರು ಫುಟ್‍ಪಾತ್‍ನಲ್ಲಿ ಓಡಾಡಲು ಅನುವು ಮಾಡಿಕೊಡಿ ನಿಮ್ಮ ವ್ಯಾಪಾರ ಕೂಡ ವೃದ್ಧಿಯಾಗಲಿದೆ ಎಂದು ಅಂಗಡಿ ಮಾಲೀಕರಿಗೆ ತಿಳಿವಳಿಕೆ ನೀಡಿದರು.

ಎಇಇ ಮರಿಗೌಡ್ರ, ಪರಿಸರ ಅಭಿಯಂತರ ಮಹೇಶ ಕೊಡಬಾಳ, ಆರೋಗ್ಯ ನಿರೀಕ್ಷಕರಾದ ಮಧುರಾಜ ಕಂಬಳಿ, ಆರ್.ಜಿ.ಬೋವಿ, ರಾಘವೇಂದ್ರ ಗವಾಡೆ, ಶೃತಿ, ಸಿಬ್ಬಂದಿಗಳಾದ ಯಲ್ಲಪ್ಪ, ನಿಂಗಪ್ಪ, ನಾಗಪ್ಪ ಸೇರಿದಂತೆ ಮತ್ತಿತರರು ಇದ್ದರು.

error: Content is protected !!