ಹರಿಹರದಿಂದ ರಾಣೇಬೆನ್ನೂರಿಗೆ ಸಿದ್ದಾರೂಢರ ಜ್ಯೋತಿ ರಥಯಾತ್ರೆ

ಹರಿಹರದಿಂದ ರಾಣೇಬೆನ್ನೂರಿಗೆ ಸಿದ್ದಾರೂಢರ ಜ್ಯೋತಿ ರಥಯಾತ್ರೆ

ಹುಬ್ಬಳ್ಳಿಯ ಜಗದ್ಗುರು ಶ್ರೀ ಸಿದ್ದಾರೂಢರ 190ನೇ ಜಯಂತಿ, ಶ್ರೀ ಗುರುನಾಥಾ ರೂಢರ 115ನೇ ಜಯಂತಿ ಹಾಗೂ ಸಿದ್ದಾರೂಢರ ಕಥಾ ಮೃತದ ಶತಮಾನೋತ್ಸವದ ಅಂಗವಾಗಿ ಹಮ್ಮಿಕೊಳ್ಳಲಾಗಿರುವ ಜ್ಯೋತಿ ರಥ ಯಾತ್ರೆಯು ನಾಳೆ ಭಾನುವಾರ ರಾಣೇಬೆನ್ನೂರು ತಾಲ್ಲೂಕಿಗೆ ಆಗಮಿಸಲಿದ್ದು, ಸಿದ್ದಾರೂಢ ಸ್ವಾಮಿಯ ಭಕ್ತರು ಭಾಗವಹಿಸುವಂತೆ ಧರ್ಮದರ್ಶಿ ಸಿದ್ದನಗೌಡ ಮನವಿ ಮಾಡಿದ್ದಾರೆ.

ಇಂದು ಹರಿಹರದ ಬ್ರಹ್ಮಾನಂದ ಮಠದಿಂದ ಹೊರಟು, ಅಲ್ಲಿನ ಐರಣಿ ಹೊಳೆ ಮಠದಲ್ಲಿ ಪೂಜೆಗೊಂಡು ನಾಳೆ ಭಾನುವಾರ ರಾಣೇಬೆನ್ನೂರು ತಾಲ್ಲೂಕಿನ ಕವಲೆತ್ತು ಗ್ರಾಮದ ಸಿದ್ದಾರೂಢ ಮಠಕ್ಕೆ ಆಗಮಿಸಲಿದೆ. ಮಾಕನೂರು, ನಾಗೇನಹಳ್ಳಿ, ಮುದೇನೂರು, ಒಡೇರಾಯನಹಳ್ಳಿ, ಹಿರೇಬಿದರಿ ಮೂಲಕ ಐರಣಿ ಹೊಳೆಮಠದಲ್ಲಿ ವಾಸ್ತವ್ಯ ಹೂಡಲಿದೆ.

ದಿನಾಂಕ 10 ರ ಸೋಮವಾರ ಖಂಡೇರಾಯನಹಳ್ಳಿ, ಕರೂರು, ಚಳಗೇರಿ, ಮಣಕೂರು, ಇಟಗಿ, ಮಾಗೋಡ ಗ್ರಾಮಗಳ ಮೂಲಕ ಹಾಯ್ದು ರಾಣೇಬೆನ್ನೂರು ನಗರದ ಶ್ರೀ ಸಿದ್ದಾರೂಢ ಮಠಕ್ಕೆ ಆಗಮಿಸುವುದು. ಮಧ್ಯಾಹ್ನ 2 ಗಂಟೆಗೆ ನಗರದಲ್ಲಿ ಮೆರವಣಿಗೆ ಮೂಲಕ  ಬೆನಕನಕೊಂಡ ಗ್ರಾಮದ ಶ್ರೀ ಸಿದ್ದಾಶ್ರಮಕ್ಕೆ ತೆರಳಲಿದೆ.

error: Content is protected !!