ರಾಣೇಬೆನ್ನೂರು ತಾಲ್ಲೂಕು ತುಮ್ಮಿನಕಟ್ಟೆ ಗ್ರಾಮದ ಬೆಲ್ಲದ ಪತೇಯಲ್ಲಿರುವ ಶ್ರೀ ಬಸವೇಶ್ವರ ದೇವರ ಜಾತ್ರಾ ಮಹೋತ್ಸವ ಇಂದು ನಡೆಯಲಿದೆ.
ಇಂದು ಬೆಳಿಗ್ಗೆ 8 ಗಂಟೆಗೆ ಶ್ರೀ ಬಸವೇಶ್ವರ ದೇವರ ರಥೋತ್ಸವ ಹಾಗೂ ಗುಗ್ಗಳ ಕಾರ್ಯಕ್ರಮವು ಶ್ರೀ ಶಿವಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು ಕಬ್ಬಿಣ ಕಂತಿಮಠ, ರಟ್ಟಿಹಳ್ಳಿ ಶ್ರೀಗಳಿಂದ ಚಾಲನೆಗೊಳ್ಳಲಿದೆ. ಮಧ್ಯಾಹ್ನ 1ಕ್ಕೆ ದೇವಸ್ಥಾನದ ಆವರಣದಲ್ಲಿ ಶ್ರೀಮತಿ ರಿಂದವ್ವ ಶಿಗ್ಲಿ ಹಾಗೂ ಕುಟುಂಬದವರಿಂದ ಅನ್ನ ಸಂತರ್ಪಣೆ ಏರ್ಪಡಿಸಲಾಗಿದೆ. ಮಧ್ಯಾಹ್ನ 3ರಿಂದ ಸಂಜೆ 5ರವರೆಗೆ ಎತ್ತುಗಳ ಮೆರವಣಿಗೆ ನೆರವೇರಲಿದೆ. ಸಂಜೆ 6ರಿಂದ ಧರ್ಮಸಭೆ ನಡೆಯಲಿದೆ.