ಜ್ಞಾನ ಭಂಡಾರ ಮಾಸ್ಟರ್ ಆರ್ಯವರ್ಧನ್ ಕೋಟಿ

ಜ್ಞಾನ ಭಂಡಾರ ಮಾಸ್ಟರ್ ಆರ್ಯವರ್ಧನ್ ಕೋಟಿ

ನಗರದಲ್ಲಿ ಇಂದು `ಸಂಗಮ ಶ್ರೀ’ ಪ್ರಶಸ್ತಿ ಪ್ರದಾನ

ವಿದ್ಯೆ ಸಾಧಕನ ಸೊತ್ತೇ ಹೊರತು ಸೋಮಾರಿಗಳದ್ದಲ್ಲ, ಹಣವಂತರದ್ದೂ ಅಲ್ಲ ಎಂಬ ಮಾತಿಗೆ 4 ವರ್ಷದ ಬಾಲ ಪ್ರತಿಭೆ ಗ್ರ್ಯಾಂಡ್ ಮಾ. ಆರ್ಯವರ್ಧನ್ ಕೋಟಿ ಸಾಕ್ಷಿಯಾಗಿದ್ದಾರೆ.

ನವಲಗುಂದ ತಾ. ತಿರ್ಲಾಪುರ ಗ್ರಾಮದ ಗ್ರಾಮೀಣ ಶಿಕ್ಷಣ ಸಂಸ್ಥೆಯ ಪ್ರೌಢ ಶಾಲೆಯ ಕನ್ನಡ ಶಿಕ್ಷಕಿ ಮಂಜುಳಾ ಒಣರೊಟ್ಟಿ ಹಾಗೂ ಪರಪ್ಪ ಕೋಟಿ ಅವರ ಸುಪುತ್ರನಾಗಿದ್ದು, ನವಲಗುಂದದ ಶ್ರೀ ಕೃಷ್ಣ ಪ್ರಾಥಮಿಕ ಶಾಲೆಯಲ್ಲಿ ಎಲ್‌ಕೆಜಿ ಓದುತ್ತಿದ್ದಾರೆ. 

ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎಂಬ ಗಾದೆಯಂತೆ ಈ ಪುಟ್ಟ ಪೋರ ತನ್ನ ವಯಸ್ಸಿಗೂ ಮೀರಿದ ಸಾಧನೆ ಮಾಡಿದ್ದಾರೆ. ಅಪಾರ ನೆನಪಿನ ಶಕ್ತಿ ಹೊಂದಿರುವ 4 ವರ್ಷದ ಬಾಲ ಪ್ರತಿಭೆ ಗ್ರ್ಯಾಂಡ್ ಮಾಸ್ಟರ್ ಆರ್ಯವರ್ಧನ್ ಕೋಟಿ ಇವರು ತಮ್ಮ ಜ್ಞಾಪಕ ಶಕ್ತಿಯನ್ನು ಅನಾವರಣಗೊಳಿಸಿ ಇಂಡಿಯಾ ಬುಕ್ ಆಫ್ ರೆಕಾರ್ಡ್-2023ಕ್ಕೆ ಸೇರ್ಪಡೆಗೊಂಡಿದ್ದಾರೆ.

ಪುಟ್ಟಪೋರ ಆರ್ಯವರ್ಧನ್ ಕೋಟಿ ತನ್ನ ಅಪಾರ ಜ್ಞಾಪಕ ಶಕ್ತಿಯಿಂದ 

* 28 ಲೋಕಸಭಾ ಸದಸ್ಯರ ಹೆಸರುಗಳು ಮತ್ತು ಕ್ಷೇತ್ರಗಳು * ಡಾ. ರಾಜಕುಮಾರ ನಟಿಸಿರುವ 206 ಚಲನಚಿತ್ರಗಳ ಹೆಸರುಗಳು * ಡಾ. ಪುನೀತ್ ರಾಜಕುಮಾರ ನಟಿಸಿದ 31 ಚಲನಚಿತ್ರಗಳ ಹೆಸರುಗಳು * ಸುಪ್ರೀಂ ಕೋರ್ಟಿನ ಮುಖ್ಯ ನ್ಯಾಯಾಧೀಶರುಗಳ ಹೆಸರುಗಳನ್ನು ಅನುಕ್ರಮವಾಗಿ 1950 ರಿಂದ 2024ರ ವರೆಗೆ * ಕರ್ನಾಟಕ ರಾಜ್ಯದ ಮುಖ್ಯಮಂತ್ರಿಗಳ ಹೆಸರುಗಳನ್ನು ಅನುಕ್ರಮವಾಗಿ 1947 ರಿಂದ 2024 ರವರೆಗೆ *  ಭಾರತದ ಪ್ರಧಾನ ಮಂತ್ರಿಗಳ ಹೆಸರುಗಳನ್ನು ಅನುಕ್ರಮವಾಗಿ 1947 ರಿಂದ 2024 ರವರೆಗೆ * ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಹೆಸರುಗಳು * ಕರ್ನಾಟಕ ರತ್ನ ಪ್ರಶಸ್ತಿ ವಿಜೇತರ ಹೆಸರುಗಳನ್ನು 1992 ರಿಂದ 2022 ರವರೆಗೆ ಅನುಕ್ರಮವಾಗಿ * ಭಾರತ ರತ್ನ ಮತ್ತು ಕರ್ನಾಟಕ ರತ್ನ ಪ್ರಶಸ್ತಿ ವಿಜೇತರ ಹೆಸರುಗಳನ್ನು 1954 ರಿಂದ 2023ರ ವರೆಗೆ ಅನುಕ್ರಮವಾಗಿ * ಪಂಪ ಪ್ರಶಸ್ತಿ ಪುರಸ್ಕೃತರ ಹೆಸರುಗಳನ್ನು 1987 ರಿಂದ 2023 ರ ವರೆಗೆ ಅನುಕ್ರಮವಾಗಿ* ನೋಬೆಲ್ ಪ್ರಶಸ್ತಿ ಪುರಸ್ಕೃತರ ಹೆಸರುಗಳನ್ನು 1913 ರಿಂದ 2019ರ ವರೆಗೆ ಅನುಕ್ರಮವಾಗಿ * ಭಾರತದ 29 ರಾಜ್ಯಗಳು ಮತ್ತು ರಾಜಧಾನಿಗಳನ್ನು ಕೇವಲ 40 ಸೆಕೆಂಡ್‌ಗಳಲ್ಲಿ * ಕರ್ನಾಟಕದ ಎಲ್ಲಾ ಜಿಲ್ಲೆಗಳ ಹೆಸರು ಭಾರತದ ಸೇನಾ ಪ್ರಶಸ್ತಿಗಳ ಹೆಸರುಗಳು * ಭಗವದ್ಗೀತೆಯ ಅಧ್ಯಾಯಗಳ ಹೆಸರುಗಳು * ಶ್ರೀ ರಾಮಚಂದ್ರನ ವಂಶ ವೃಕ್ಷ * ನಕ್ಷತ್ರಗಳು, ತಿಥಿಗಳು, ನೆರೆಹೊರೆಯ ರಾಷ್ಟ್ರಗಳು, ರಾಜ್ಯಗಳು, ವೇದಗಳು, ವಿಶ್ವ ಸಂಸ್ಥೆಯ ಅಧಿಕೃತ ಭಾಷೆಗಳು, ಕರ್ನಾಟಕದಲ್ಲಿರುವ ಪೊಲೀಸ್ ವಲಯಗಳು, ಪ್ರಥಮ ಮಹಿಳಾ ಸಾಧಕಿಯರು, ವಿವಿಧ ರಾಷ್ಟ್ರಗಳ ರಾಷ್ಟೀಯ ಹೂ ಗಳ ಹೆಸರು, ರಾಜ್ಯಗಳ ವಿಶೇಷತೆಗಳು, ಗ್ರಹಗಳು, ಖಂಡಗಳು ಇವೆಲ್ಲವನ್ನೂ ಕುರಿತು 3000 ಕ್ಕೂ ಹೆಚ್ಚು ಸಾಮಾನ್ಯ ಜ್ಞಾನ ಪ್ರಶ್ನೆಗಳಿಗೆ ಪಟಪಟನೆ ಉತ್ತರಿಸುತ್ತಾನೆ. 

ಈ ಬಾಲಕನ ಅಪಾರ ಜ್ಞಾನ ಭಂಡಾರಕ್ಕೆ ಮತ್ತು ಜ್ಞಾಪಕ ಶಕ್ತಿಯನ್ನು ಮೆಚ್ಚಿ `ಇಂಡಿಯಾ ಬುಕ್ ಆಫ್ ರೆಕಾರ್ಡ್’ ನವರು, ಇಂಡಿಯಾ ಬುಕ್ ಆಫ್ ರೆಕಾರ್ಡ್ ಪುಸ್ತಕದಲ್ಲಿ ಈ ಪುಟ್ಟ ಬಾಲಕನ ಹೆಸರನ್ನು ದಾಖಲಿಸಿದ್ದಾರೆ. 

ಅಲ್ಲದೇ ವರ್ಲ್ಡ್ ರೆಕಾರ್ಡ್ ಯೂನಿವರ್ಸಿಟಿಯಿಂದ `ಗ್ರ್ಯಾಂಡ್ ಮಾಸ್ಟರ್’ ಎಂಬ ಅವಾರ್ಡ್‌ ಪ್ರದಾನ ಮಾಡಿದ್ದಾರೆ. ಜೊತೆ ಜೊತೆಗೆ `ಕರುನಾಡ ಸಿರಿ’, `ಲಿಟಲ್ ಚಾಂಪಿಯನ್ ಆಫ್ ದಿ ಇಯರ್’ ಸೇರಿದಂತೆ ಅನೇಕ ಪ್ರತಿಷ್ಠಿತ ಪ್ರಶಸ್ತಿಗಳು ಈತನ ಮುಡಿಗೇರಿವೆ. ವಯಸ್ಸಿಗಿಂತ ಜ್ಞಾನ ಮುಖ್ಯ ಎಂಬುದನ್ನು ಈ ಪುಟ್ಟಪೋರ ನಿರೂಪಿಸಿದ್ದಾರೆ. ಮತ್ತು ಈತ ಎಲ್ಲರಿಗೂ ಮಾದರಿಯಾಗಿದ್ದಾರೆ.

– ಎಂ.ಎಸ್. ಚನ್ನಬಸವ ಶೀಲವಂತ್, ದಾವಣಗೆರೆ. 

error: Content is protected !!