ದಾವಣಗೆರೆ, ಫೆ. 6- ಜಿಲ್ಲಾ ನ್ಯಾಯಾಲಯಗಳ ಸಂಕೀರ್ಣದ ಆವರಣದಲ್ಲಿ ಪಾಲಿಕೆ ಸಿಬ್ಬಂದಿ ಓಬಳಾನಾಯ್ಕ ಮತ್ತು ಶ್ರೀನಿವಾಸ ಅವರ ತಂಡದವರು ಆರು ಬೀದಿ ನಾಯಿಗಳನ್ನು ಬಲೆ ಬೀಸಿ ಸೆರೆ ಹಿಡಿದಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿತ್ತು. ಇವುಗಳಿಂದ ನಿತ್ಯ ಕಕ್ಷಿದಾರರಿಗೆ, ವಕೀಲರಿಗೆ, ಸಿಬ್ಬಂದಿ ವರ್ಗಕ್ಕೆ ಹಿಂಸೆ ಆಗುತ್ತಿತ್ತು. ಈ ದಿನದಂದು ಸುಮಾರು ಏಳೆಂಟು ಕಕ್ಷಿದಾರರಿಗೆ ಬೀದಿ ನಾಯಿಗಳು ಕಚ್ಚಿದ್ದವು. ಆದ್ದರಿಂದ ಈ ಬೀದಿ ನಾಯಿಗಳನ್ನು ಹಿಡಿಯಲು ಮಹಾನಗರ ಪಾಲಿಕೆಗೆ ದೂರು ನೀಡಲಾಗಿತ್ತು. ಸಾರ್ವಜನಿಕ ಸ್ಥಳಗಳಲ್ಲಿ ಉಪದ್ರವಾಗುತ್ತಿದೆ ಎಂದ ರಿತು ಕೆಲವೇ ಕ್ಷಣಗಳಲ್ಲಿ ಈ ವಿಭಾಗಕ್ಕೆ ಸಂಬಂಧಿಸಿದ ಓಬ್ಳಾ ನಾಯಕ್ ಮತ್ತು ಶ್ರೀನಿವಾಸ ಅವರ ತಂಡವು ಆಗಮಿಸಿ, ಯಶಸ್ವಿಯಾಗಿ ಕಾರ್ಯಾಚರಣೆ ನಡೆಯಿಸಿ, ಆರು ನಾಯಿಗಳನ್ನು ತಮ್ಮ ಬಲೆಗಳಿಂದ ಹಿಡಿದರು. ಬೀದಿ ನಾಯಿಗಳಿಂದ ಸಾರ್ವಜನಿಕರು ಸಮಸ್ಯೆ ಎದುರಿಸುತ್ತಿದ್ದಲ್ಲಿ 9060196051 ಈ ಮೊಬೈಲ್ ಸಂಖ್ಯೆಗೆ ಸಂಪರ್ಕಿಸಬಹುದು.