ಮಾನ್ಯರೇ,
ಇಲ್ಲಿನ ಮಹಾನಗರ ಪಾಲಿಕೆ ಆವರಣದ ಶ್ರೀಮತಿ ರಾಧಮ್ಮ ಚನ್ನಗಿರಿ ರಂಗಪ್ಪ ಸ್ಮಾರಕ ರಂಗಮಂದಿರದ ಬಳಿ ಮುಜುಗರ ತರಿಸುವ ಮೂತ್ರಾಲಯ ನಿರ್ಮಾಣವಾಗಿದೆ.
ಝರಾಕ್ಸ್ ಅಂಗಡಿ ಪಕ್ಕದಲ್ಲೇ ಈ ಮೂತ್ರಾಲಯ ನಿರ್ಮಾಣವಾಗಿದ್ದು, ಜನಜಂಗುಳಿ ಪ್ರದೇಶ ಇದಾಗಿದ್ದು, ಇಲ್ಲಿ ನಿಂತರೆ ಮೂತ್ರಾಲಯದ ಒಳಗಿನ ಆವರಣ ನೇರವಾಗಿ ಕಾಣಿಸುತ್ತದೆ.
ಇಂತಹ ಜನಭರಿತ ಪ್ರದೇಶದಲ್ಲಿರುವ ಮೂತ್ರಾಲಯ ಬಳಸುವ ಸಾರ್ವಜನಿಕರು ಮುಜುಗರ ಪಡುವಂತಾಗಿದೆ. ಆದ್ದರಿಂದ ಈ ಕೂಡಲೇ ಸಂಬಂಧಿಸಿದ ಅಧಿಕಾರಿಗಳು ಮೂತ್ರಾಲಯ ಕಟ್ಟಡದ ರೂಪವನ್ನು ಬದಲಿಸಿ ಸರಿಯಾಗಿ ನಿರ್ಮಿಸಬೇಕೆಂದು ವಿನಂತಿ.
– ವೈ. ವಾದಿರಾಜ ಭಟ್, ವಕೀಲರು, ದಾವಣಗೆರೆ.