ಹೊನ್ನಾಳಿ,ಫೆ.4- ವ್ಯಕ್ತಿ ಶಕುನಿ ಯಾದರೆ ಸಮಾಜವು ಛಿದ್ರಗೊಳ್ಳುತ್ತದೆ, ಶಿವನ ಅಪಮಾನ ತಡೆದು ದುಷ್ಟಶಕ್ತಿ ನಿರ್ನಾಮ ಮಾಡಿದ ವೀರಭದ್ರನಂತಾ ದರೆ ಸಮಾಜವು ಸುಭದ್ರವಾಗಿ ರುತ್ತದೆ ಎಂದು ರಂಭಾಪುರಿ ಡಾ. ವೀರ
ಸೋಮೇಶ್ವರ ಜಗದ್ಗುರುಗಳು ಹೇಳಿದರು.
ಶ್ರೀಗಳು ಪಟ್ಟಣದ ಪೇಟೆ ವೀರಭದ್ರೇಶ್ವರ ಸ್ವಾಮಿ ನೂತನ ಶಿಲಾ ಮಂದಿರ ಉದ್ಘಾಟನೆ ಮತ್ತು ಮೂರ್ತಿ ಪ್ರಾಣ ಪ್ರತಿಷ್ಟಾಪನೆ, ಗೋಪುರ ಕಳಾಸಾರೋಹಣ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.
ಸುಂದರ ದೇವಾಲಯ, ಅದರಲ್ಲಿನ ಮೂರ್ತಿಗಳನ್ನು ನೋಡಿದಾಗ ನಾಸ್ತಿಕ ನನ್ನು ಆಸ್ತಿಕನನ್ನಾಗಿ ಮಾಡುವ ಶಕ್ತಿಯನ್ನು ತುಂಬಲಿದೆ. ಈ ದೇವಸ್ಥಾನದ ಕಟ್ಟಡವು ವಿಳಂಬಗೊಂಡಿದ್ದರಿಂದ ಪಟ್ಟಣಶೆಟ್ಟಿ ಪರಮೇಶರವರನ್ನು ಒಳಗೊಂಡ ಸಮಿತಿಯು ಈ ವಿಷಯವಾಗಿ ನಮ್ಮಲ್ಲಿ ಭಿನ್ನಯಿಸಿದ್ದಕ್ಕೆ ಸ್ಪಂದಿಸಿ ಕೆಲ ತಿಂಗಳ ಅಂತರದಲ್ಲಿ ಈ ಕ್ಷೇತ್ರಕ್ಕೆ ಬಂದು ಹೋಗಿದ್ದನ್ನು ಸ್ಮರಿಸಿದರು.
ಹೊನ್ನಾಳಿ ಚನ್ನಮಲ್ಲಿಕಾರ್ಜುನ ಸ್ವಾಮೀಜಿ ಮಾತನಾಡಿ, ಹಂಚಿನ ಮನೆ ದೇವಸ್ಥಾನವು ಇಂದು ಕಲ್ಲಿನಿಂದ ನಿರ್ಮಾಣಗೊಂಡಿದೆ. ದೇವಸ್ಥಾನದ 4 ದಿಕ್ಕಿನಲ್ಲೂ ಮಾರಿಕಾಂಭ, ಹಳದಮ್ಮ, ದುರ್ಗಮ್ಮ, ಕೊಟ್ಟೂರೇಶ್ವರ ದೇವಸ್ಥಾನ ಗಳಿದ್ದು ಈ ದೇವಸ್ಥಾನವು ಹೆಚ್ಚು ದೈವಿಕ ಶಕ್ತಿಕೇಂದ್ರವಾಗಲಿದೆ ಎಂದರು.
ಶಾಸಕ ಡಿ.ಜಿ. ಶಾಂತನಗೌಡ ಮಾತನಾಡಿ, ದೇವರ ಪೂಜಿಸದ, ತಂದೆ ತಾಯಿ ಪೂಜಿಸದ, ಗುರುಗಳನ್ನು ಗೌ ರವಿಸದವ ಶತಮೂರ್ಖರಾಗಿರುತ್ತಾರೆ. ಇದರ ಪರಿಣಾಮದ ಜಾಗೃತಿಯನ್ನು ಜನರಲ್ಲಿ ಮೂಡಿಸಿ ರಂಭಾಪುರಿ ಜಗದ್ಗುರುಗಳವರು ಸಮಾಜದ ಒಳಿತಿಗೆ ಮುಂದಾಗುತ್ತಿದ್ದಾರೆಂದು ಬಣ್ಣಿಸಿದರು.
ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಮಾತನಾಡಿ, ರಂಭಾಪುರಿ ಶ್ರೀಗಳ ಆಶಯದಂತೆ ಪಟ್ಟಣದ ಕನಕ ರಂಗಮಂದಿರಲ್ಲಿ ರೇಣುಕಾ ಜಯಂತಿಯನ್ನು ಅದ್ಧೂರಿಯಾಗಿ ಆಚರಿಸಿದ್ದನ್ನು ಸ್ಮರಿಸಿ ಧರ್ಮ ಮತ್ತು ಭಕ್ತಿಗೆ ತಾಲ್ಲೂಕಿನ ಜನತೆಯಲ್ಲಿ ಬಡತನವಿಲ್ಲ ಎಂದು ವಿವರಿಸಿದರು.
ಸಮಾರಂಭದಲ್ಲಿ ಹೆಚ್.ಬಿ ಗಿಡ್ಡಪ್ಪ, ಹೆಚ್.ಎ ಉಮಾಪತಿ, ಬೆನಕನಹಳ್ಳಿ ವೀರಣ್ಣ, ಸಣ್ಣಕ್ಕಿ ಬಸವನಗೌಡ, ಹೆಚ್. ಆರ್. ಗಂಗಾಧರ, ಚನ್ನಬಸಯ್ಯ, ಪೇಟೆ ಪ್ರಶಾಂತ ಮತ್ತು ಇತರರು ಉಪಸ್ಥಿತರಿದ್ದರು.