ಹರಿಹರ, ಫೆ. 4 – ಹರಿಹರೇಶ್ವರ ದೇವಸ್ಥಾನ ರಸ್ತೆಯ ತೇರುಗಡ್ಡೆ ವೃತ್ತದಲ್ಲಿರುವ ಬೀಡಾ ಸ್ಟಾಲ್‌ನಲ್ಲಿ ಇಂದು ಸಂಜೆ ಬೆಂಕಿ ಅನಾಹುತ ಸಂಭವಿಸಿದೆ. ಸ್ಥಳಕ್ಕೆ ಅಗ್ನಿ ಶಾಮಕ ದಳದ ಸಿಬ್ಬಂದಿಗಳು ಆಗಮಿಸಿ ಬೆಂಕಿಯನ್ನು ನಂದಿಸಿದರು.
ಅಂಗಡಿಯ ಮಾಲೀಕ ಪರಶುರಾಮ್ ಅವರು, ಹರಿಹರೇಶ್ವರ ಸ್ವಾಮಿ ರಥೋತ್ಸವದ ನಿಮ್ಮಿತ್ತವಾಗಿ ದಾಸ್ತಾನು ಖರೀದಿಸಿ ಶೇಖರಣೆ ಮಾಡಿಕೊಂಡಿದ್ದರು. ಬೆಂಕಿ ಅನಾಹುತದಿಂದ ಸಾವಿರಾರು ರೂ.ಗಳಷ್ಟು ನಷ್ಟವಾಗಿದೆ.
ಈ ಸಂದರ್ಭದಲ್ಲಿ ಅಗ್ನಿಶಾಮಕ ದಳದ ಪಿಎಸ್ಐ ಸಂಜೀವ್ ಕುಮಾರ್, ಮತ್ತು ಸಿಬ್ಬಂದಿಗಳು ಹಾಗೂ ಪೊಲೀಸ್ ಸಿಬ್ಬಂದಿ ರವಿಕುಮಾರ್ ಹಾಗೂ ಇತರರು ಹಾಜರಿದ್ದರು.