ಮಾನ್ಯರೇ,
ದಾವಣಗೆರೆಯ ಸರಸ್ವತಿ ನಗರದ ‘ಎ’ ಬ್ಲಾಕ್, 3ನೇ ಮುಖ್ಯ ರಸ್ತೆ, 7ನೇ ಅಡ್ಡ ರಸ್ತೆಯಲ್ಲಿ ರಸ್ತೆ ದೀಪ ಇರದೇ ಇಡೀ ರಸ್ತೆಯು ಕತ್ತಲೆಯಿಂದ ತುಂಬಿದೆ. ಇದೇ ಸ್ಥಳದಲ್ಲಿ ಖಾಲಿ ನಿವೇಶನವಿದ್ದು, ಇಲ್ಲಿ ಆರರಿಂದ ಏಳು ಹಾವುಗಳು ಕಂಡು ಬಂದಿರುತ್ತವೆ.
ದಟ್ಟವಾಗಿ ಪೊದೆಗಳು ಬೆಳೆದಿರುವುದರಿಂದ ಹಾವುಗಳು ತಮ್ಮ ವಾಸಸ್ಥಾನವನ್ನು ಭದ್ರಪಡಿಸಿಕೊಂಡಿವೆ. ಇದರಿಂದ ಸಾರ್ವಜನಿಕರು ಸಂಜೆ ನಡಿಗೆಗೆ ಹೊರ ಹೋಗಲು ಭಯಭೀತರಾಗಿದ್ದಾರೆ. ಈ ಕುರಿತಾಗಿ ಈ ಹಿಂದೆಯೂ ಸಂಬಂಧಿಸಿದ ಅಧಿಕಾರಿಗಳಲ್ಲಿ ದೂರು ನೀಡಿದ್ದರೂ ಅವರು ನಿರ್ಲಕ್ಷ್ಯ ಮಾಡಿರುತ್ತಾರೆ.
ಆದ್ದರಿಂದ ಈ ಕೂಡಲೇ ಸಂಬಂಧಿಸಿದ ಅಧಿಕಾರಿಗಳು ಸದರಿ ಖಾಲಿ ನಿವೇಶನದಲ್ಲಿ ಬೆಳೆದಿರುವ ಪೊದೆಗಳನ್ನು ಶೀಘ್ರವಾಗಿ ತೆರೆವುಗೊಳಿಸಿ, ರಸ್ತೆಗೆ ವಿದ್ಯುತ್ ದೀಪವನ್ನು ಅಳವಡಿಸುವುದರ ಮೂಲಕ ಅನುಕೂಲ ಮಾಡಿಕೊಡಬೇಕೆಂದು ಸರಸ್ವತಿ ನಗರದ ಸಾರ್ವಜನಿಕರ ಪರ ವಿನಂತಿ.
– ಆಡಳಿತ ಮಂಡಳಿ,
ಸಂವೇದ ವಿಶೇಷ ಮಕ್ಕಳ ಶಾಲೆ, ದಾವಣಗೆರೆ.