ಅಕ್ರಮ ಪಂಪ್‌ಸೆಟ್‌ಗಳ ತೆರವು ಆರಂಭ

ಅಕ್ರಮ ಪಂಪ್‌ಸೆಟ್‌ಗಳ ತೆರವು ಆರಂಭ

ಮಲೇಬೆನ್ನೂರು : ಮೊದಲು ಮೇಲ್ಭಾಗದಲ್ಲಿ ತೆರವುಗೊಳಿಸಿ ; ನಂದಿಗಾವಿ ಶ್ರೀನಿವಾಸ್ ಆಗ್ರಹ

ಮಲೇಬೆನ್ನೂರು, ಫೆ.5- ಭದ್ರಾ ನಾಲೆಗೆ ಅಳವಡಿಸಿರುವ ಅಕ್ರಮ ಪಂಪ್‌ಸೆಟ್‌ಗಳ ತೆರವು ಕಾರ್ಯಾಚರಣೆ ಬುಧವಾರ ಮಲೇಬೆನ್ನೂರು ಭಾಗದಲ್ಲಿ ಆರಂಭವಾಗಿದ್ದು, ಗುರುವಾರವೂ ಕಾರ್ಯಾಚರಣೆ ಮುಂದುವರಿಯಲಿದೆ.

ಜಿಲ್ಲಾಧಿಕಾರಿಗಳ ನಿರ್ದೇಶನದಂತೆ ಅಕ್ರಮ ಪಂಪ್‌ಸೆಟ್‌ಗಳ ತೆರವಿನ ಜೊತೆಗೆ ವಿದ್ಯುತ್ ಸಂಪರ್ಕವನ್ನು ಕಟ್ ಮಾಡಿದ್ದೇವೆ ಎಂದು ಉಪತಹಶೀಲ್ದಾರ್ ಆರ್.ರವಿ ತಿಳಿಸಿದರು.

ಎಇಇ ಕೃಷ್ಣಮೂರ್ತಿ, ಗ್ರಾಮ ಆಡಳಿತಾ ಧಿಕಾರಿ ಅಣ್ಣಪ್ಪ ಮತ್ತು ಪೊಲೀಸ್ ಸಿಬ್ಬಂದಿ, ಬೆಸ್ಕಾಂ ಸಿಬ್ಬಂದಿ ಈ ವೇಳೆ ಹಾಜರಿದ್ದರು.

ಚನ್ನಗಿರಿ, ಹೊನ್ನಾಳಿ ತಾಲ್ಲೂಕುಗಳಲ್ಲೂ ಅಕ್ರಮ ಪಂಪ್‌ಸೆಟ್‌ಗಳ ತೆರವು ಕಾರ್ಯಾಚರಣೆ ಆದಾಗ ಮಾತ್ರ ಅಚ್ಚುಕಟ್ಟಿನ ಕೆಳಭಾಗಕ್ಕೆ ಸಮರ್ಪಕ ನೀರು ಹರಿದು ಬರಲಿದೆ ಎಂದು ಕಾಂಗ್ರೆಸ್ ಮುಖಂಡ ಹಾಗೂ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಹರಿಹರ ತಾ. ಅಧ್ಯಕ್ಷ ನಂದಿಗಾವಿ ಶ್ರೀನಿವಾಸ್ ಅವರು ಕೊಮಾರನಹಳ್ಳಿ ಬಳಿ ನಾಲೆ ನೀರಿನ ಗೇಜ್ ವೀಕ್ಷಿಸಿ ಮಾತನಾಡಿದರು.

ಕೊಮಾರನಹಳ್ಳಿ ಬಳಿ ನಾಲೆಯಲ್ಲಿ ನಿತ್ಯವೂ 5 ಅಡಿಗಿಂತ ಹೆಚ್ಚು ನೀರು ಹರಿಯುವಂತೆ ನೋಡಿಕೊಳ್ಳಿ ಎಂದು ಶ್ರೀನಿವಾಸ್ ಅವರು ಮಲೇಬೆನ್ನೂರು ನೀರಾವರಿ ಕಚೇರಿಗೆ ತೆರಳಿ ಪ್ರಭಾರ ಇಇ ಮಂಜುನಾಥ್, ಬಸವಾಪಟ್ಟಣ ಎಇಇ ಧನಂಜಯ, ಮಲೇಬೆನ್ನೂರು ಎಇಇ ಕೃಷ್ಣಮೂರ್ತಿ ಅವರಿಗೆ ಹೇಳಿದರು.

ನಂತರ ಶ್ರೀನಿವಾಸ್ ಅವರು ಕೊಮಾರನಹಳ್ಳಿ ಬಳಿ ನಾಲೆಯಲ್ಲಿ ನೀರಿನ ಗೇಜ್ ವೀಕ್ಷಿಸಿ, ಇಲ್ಲಿ 5 ಅಡಿ ನೀರು ಹರಿದರೆ ಮಾತ್ರ ಕೆಳಭಾಗಕ್ಕೆ ನೀರು ಹೋಗಲಿದೆ ಎಂದು ಇಂಜಿನಿಯರ್‌ಗಳಿಗೆ ತೋರಿಸಿ ಹೇಳಿದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಬಿ.ಅಬೀದ್ ಅಲಿ ಮತ್ತಿತರರು ಈ ವೇಳೆ ಹಾಜರಿದ್ದರು.

error: Content is protected !!