ರೇಣುಕಾಂಬ ಕ್ರೆಡಿಟ್ ಸೊಸೈಟಿ ಅಧ್ಯಕ್ಷರಾಗಿ ಶಂಕರ್, ಉಪಾಧ್ಯಕ್ಷರಾಗಿ ಎ. ನಾಗರಾಜ್

ರೇಣುಕಾಂಬ ಕ್ರೆಡಿಟ್ ಸೊಸೈಟಿ ಅಧ್ಯಕ್ಷರಾಗಿ ಶಂಕರ್, ಉಪಾಧ್ಯಕ್ಷರಾಗಿ ಎ. ನಾಗರಾಜ್

ದಾವಣಗೆರೆ, ಫೆ. 1- ಶ್ರೀ ರೇಣುಕಾಂಬ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ನೂತನ ಆಡಳಿತ ಮಂಡಳಿ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆಯಲ್ಲಿ ಸೊಸೈಟಿಯ ಹಿರಿಯ ನಿರ್ದೇಶಕ ಹೆಚ್. ಶಂಕರ್ ಅಧ್ಯಕ್ಷರಾಗಿ ಹಾಗೂ ಸೊಸೈಟಿಯ ಹಿರಿಯ ನಿರ್ದೇಶಕ ಎ. ನಾಗರಾಜ್ ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಚುನಾವಣಾಧಿಕಾರಿ ಹಾಗೂ ಸಹಕಾರ ಅಭಿವೃದ್ಧಿ/ಮಾರಾಟಾಧಿಕಾರಿ  ಸತೀಶ್ ನಾಯ್ಕ ಎಲ್. ಅವರು ಚುನಾವಣೆಯ ನೇತೃತ್ವ ವಹಿಸಿದ್ದರು.

error: Content is protected !!