ಭರಮಸಾಗರದಲ್ಲಿ ನಾಳೆಯಿಂದ ತರಳಬಾಳು ಹುಣ್ಣಿಮೆ : ಬೈಕ್ ರ‍್ಯಾಲಿ

ಭರಮಸಾಗರದಲ್ಲಿ ನಾಳೆಯಿಂದ ತರಳಬಾಳು ಹುಣ್ಣಿಮೆ : ಬೈಕ್ ರ‍್ಯಾಲಿ

ಚಿತ್ರದುರ್ಗ, ಫೆ. 2- ತಾಲ್ಲೂಕಿನ ಭರಮಸಾಗರದಲ್ಲಿ ನಾಡಿದ್ದು ದಿನಾಂಕ 4 ರಿಂದ 12 ರವರೆಗೆ ನಡೆಯಲಿರುವ 76ನೇ ತರಳಬಾಳು ಹುಣ್ಣಿಮೆ ಮಹೋತ್ಸವದ ಅಂಗವಾಗಿ ಸಿರಿಗೆರೆಯ ಶ್ರೀ ತರಳಬಾಳು ಜಗದ್ಗುರು ಬೃಹನ್ಮಠದಿಂದ ಭರಮಸಾಗರ ದವರೆಗೆ ಬೃಹತ್ ಬೈಕ್ ರ‍್ಯಾಲಿಯ ಮೂಲಕ  ಶ್ರೀ ತರಳಬಾಳು ಜಗದ್ಗುರು  ಡಾ. ಶಿವ ಮೂರ್ತಿ ಶಿವಾಚಾರ್ಯ ಮಹಾಸ್ವಾಮೀಜಿ ಅವರನ್ನು ಕರೆತರಲಾಗುವುದು.

 ಭರಮಸಾಗರದ ನಿರಂಜನ ಮೂರ್ತಿ ಕಲ್ಯಾಣ ಮಂಟಪದಲ್ಲಿ ಭಾನುವಾರ ನಡೆದ ಶ್ರೀ ತರಳಬಾಳು  ಶಿವಸೈನ್ಯ ರಾಜ್ಯ ಘಟಕದ ಪದಾಧಿಕಾರಿಗಳ ಸಭೆಯಲ್ಲಿ ಈ ಬಗ್ಗೆ ತೀರ್ಮಾನಿಸಲಾಯಿತು.

 ರಾಲಿಯು ಸಿರಿಗೆರೆಯಿಂದ ನಾಡಿದ್ದು ದಿನಾಂಕ 4 ರ ಬೆಳಗ್ಗೆ 10 ಗಂಟೆಗೆ ಪ್ರಾರಂಭಗೊಂಡು ಭರಮಸಾಗರ ಹೋಬಳಿಯ ಸುಮಾರು 30 ಹಳ್ಳಿಗಳ ಮೂಲಕ ಸಾಗಿ  ಸುಮಾರು 5000 ಬೈಕ್ ರ‍್ಯಾಲಿಯ ಮೂಲಕ ಸಂಜೆ ನಾಲ್ಕು ಗಂಟೆಗೆ ಭರಮಸಾಗರದಲ್ಲಿ ನಡೆಯಲಿರುವ ಶ್ರೀ ತರಳಬಾಳು ಹುಣ್ಣಿಮೆ ಮಹೋತ್ಸವದ ಮಹಾ ಮಂಟಪಕ್ಕೆ  ತಲುಪಲಿದೆ.

ಭರಮಸಾಗರ ಹೋಬಳಿಯ ಭಕ್ತರ ಆಶಯದಂತೆ ಅಂದು ಸಂಜೆ 4 ಗಂಟೆಗೆ  ಡಾ. ಶಿವಮೂರ್ತಿ ಶಿವಾ ಚಾರ್ಯ ಮಹಾಸ್ವಾಮಿಗಳವರ ತೆಪ್ಪೋತ್ಸವ ಕಾರ್ಯಕ್ರಮ ವನ್ನು ಭರಮಸಾಗರದ ಕೆರೆಯಲ್ಲಿ  ಹಮ್ಮಿಕೊಳ್ಳಲಾಗಿದೆ.

ಸಭೆಯಲ್ಲಿ ಶಶಿಧರ ಹೆಮ್ಮನಬೇತೂರು, ಮೋಹನ್ ಸಿರಿಗೆರೆ, ಕುಮಾರ್ ಮೆಳ್ಳೆಕಟ್ಟೆ, ಬಸವ ರಾಜ್ ಸಿರಿಗೆರೆ, ಶೈಲೇಶ್ ಚೌಲಹಳ್ಳಿ, ಶ್ರೀನಿವಾಸ್ ರಾಮಘಟ್ಟ, ಸಿದ್ದೇಶ್ ನಂದಿ ಕಂಬ, ರಾಕೇಶ್ ಸಾತಿ, ಲಿಂಗರಾಜ್ ನಾಗನೂರು, ಅಶೋಕ್ ಹೊನ್ನ ನಾಯಕನಹಳ್ಳಿ, ಮಲ್ಲಿಕಾರ್ಜುನ್ ಮೆಳ್ಳೆಕಟ್ಟೆ, ಸಂತೋಷ್ ಗಂಗನಕಟ್ಟೆ, ಮತ್ತಿತರ ಪದಾಧಿಕಾರಿಗಳು ಹಾಗೂ ಗಣ್ಯರು ಹಾಜರಿದ್ದರು  

ಜಗದ್ಗುರುಗಳು ಆಗಮಿಸುವ ಮಾರ್ಗ : ನಾಳೆ ಮಂಗಳವಾರದಿಂದ ನಡೆಯಲಿರುವ ತರಳಬಾಳು ಹುಣ್ಣಿಮೆ ಮಹೋತ್ಸವ ಕಾರ್ಯಕ್ರಮದಲ್ಲಿ ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿಯವರು ಭಾಗವಹಿಸುವ ಮುನ್ನ ಸಿರಿಗೆರೆಯಿಂದ ಭರಮಸಾಗರಕ್ಕೆ ಬರುವ ಮಾರ್ಗದ ವಿವರ ಇಂತಿದೆ.

ಸಿರಿಗೆರೆಯ ಐಕ್ಯಮಂಟಪದಿಂದ ಬೆಳಿಗ್ಗೆ 10.30 ಕ್ಕೆ ಹೊರಟು, 10.35 ಓಬವ್ವನಾಗ್ತಿಹಳ್ಳಿ, 10.40 ಸಿರಿಗೆರೆ ಸರ್ಕಲ್, 10.50 ಚಿಕ್ಕಬೆನ್ನೂರು, 11 ಕೊಳಹಾಳು, 11.10 ಬೇಡರ ಶಿವನಕೆರೆ, 11.20 ಬಸವನ ಶಿವನಕೆರೆ, 11.30 ಹಿರೇಅಬ್ಬಿಗೆರೆ, 11.40 ಚಿಕ್ಕಬ್ಬಿಗೆರೆ, 11.50 ಮುದ್ದಾಪುರ, 12 ಮುದ್ದಾಪುರ ಮ್ಯಾಸರಹಟ್ಟಿ, 12.10 ಯಳಗೋಡು, 12.20 ಬಸ್ತಿಹಳ್ಳಿ, 12.30 ಹುಲ್ಲೇಹಾಳು, 12.45 ನೆಲ್ಲಿಕಟ್ಟೆ, 12.50 ಹೊಸಹಟ್ಟಿ(ಇಸಾಮುದ್ರ), 1 ಕ್ಕೆ ಕಾಲಗೆರೆ, 1.10 ಕೋಡಿಹಳ್ಳಿ, 1.20 ಕೋಗುಂಡೆ, 1.30 ಬಹದ್ದೂರ್‌ ಘಟ್ಟ, 1.40 ಎಮ್ಮನಘಟ್ಟ, 1.50 ಪಂಜನಯ್ಯನಹಟ್ಟಿ, 2 ಗಂಟೆಗೆ ನಂದೀಹಳ್ಳಿ, 2.10 ದ್ಯಾಪನಹಳ್ಳಿ, 2.20 ಚೌಲಿಹಳ್ಳಿ, 3ಕ್ಕೆ ಚೌಲಿಹಳ್ಳಿ ಗೊಲ್ಲರಹಟ್ಟಿ, 3.10 ಕೋಡಿರಂಗವ್ವನಹಳ್ಳಿ, 3.20 ಕೋಡಿರಂಗವ್ವನಹಳ್ಳಿ ವಡ್ಡರಹಟ್ಟಿ, 3.30 ಹೆಗಡೆಹಾಳು, 3.40 ಕಸವನಹಳ್ಳಿ, 3.50 ಭರಮಸಾಗರ ಗೊಲ್ಲರಹಟ್ಟಿ, 4 ಭರಮಸಾಗರ, 4.10 ಬಿಚ್ಚುಗತ್ತಿ ಭರಮಣ್ಣನಾಯಕ ತೆಪ್ಪೋತ್ಸವ, ನಂತರ ತರಳಬಾಳು ಹುಣ್ಣಿಮೆ ಮಹೋತ್ಸವದ ಬಿಚ್ಚುಗತ್ತಿ ಭರಮಣ್ಣನಾಯಕ ಮಹಾಮಂಟಪಕ್ಕೆ ಆಗಮನ.

error: Content is protected !!