ದಾವಣಗೆರೆ, ಫೆ. 2- ತುರ್ತು ಸ್ಪಂದನಾ ವ್ಯವಸ್ಥೆಯ ತಿಂಗಳ `ಉತ್ತಮ ತುರ್ತು ಸ್ಪಂದನಾ ಅಧಿಕಾರಿ’ (Best Responder Of the Month ) ಪ್ರಶಸ್ತಿಗೆ ಜಿಲ್ಲೆಯ ಮೂವರು ಹೊಯ್ಸಳ ಸಿಬ್ಬಂದಿ ಆಯ್ಕೆಯಾಗಿದ್ದಾರೆ.
ಗ್ರಾಮಾಂತರ ಪೊಲೀಸ್ ಠಾಣೆಯ ಪೊಲೀಸ್ ಹೆಡ್ ಕಾನ್ಸ್ಟೇಬಲ್ ಮಾಲತೇಶ್, ಜಿಲ್ಲಾ ಸಶಸ್ತ್ರ ಮೀಸಲು ಪಡೆ ದಾವಣಗೆರೆ ಘಟಕದ ಪೊಲೀಸ್ ಕಾನ್ಸ್ಟೇಬಲ್ ವಿನೋದ್ ಕುಮಾರ್, ಜಿಲ್ಲಾ ನಿಸ್ತಂತು ವಿಭಾಗದ ಹೆಡ್ ಕಾನ್ಸ್ಟೇಬಲ್ ಸಂತೋಷ್ ಪ್ರಶಸ್ತಿ ಸ್ವೀಕರಿಸಿದ್ದಾರೆ. ಡಿಜಿ ಮತ್ತು ಐಜಿಪಿ ಅಲೋಕ್ ಮೋಹನ್ ಅವರು, ಪ್ರಶಸ್ತಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ನವೆಂಬರ್-2024ರ ಪ್ರಶಂಸನಾ ಪತ್ರ ಹಾಗೂ 5 ಸಾವಿರ ನಗದು ಬಹುಮಾನ ನೀಡಿದ್ದಾರೆ. ಪ್ರಶಸ್ತಿ ಪುರಸ್ಕೃತರಿಗೆ ಜಿಲ್ಲಾ ಪೊಲೀಸ್ ಇಲಾಖೆಯಿಂದ ಅಭಿನಂದಿಸಲಾಯಿತು.