ಬಸವಪ್ರಭು ಶ್ರೀಗೆ ಕುವೆಂಪು ವಿವಿಯಿಂದ ಪಿಹೆಚ್‌ಡಿ ಪದವಿ

ಬಸವಪ್ರಭು ಶ್ರೀಗೆ ಕುವೆಂಪು ವಿವಿಯಿಂದ ಪಿಹೆಚ್‌ಡಿ ಪದವಿ

ದಾವಣಗೆರೆ, ಜ. 22- ನಗರದ ಶ್ರೀ ಶಿವಯೋಗಾ ಶ್ರಮ – ವಿರಕ್ತಮಠದ ಶ್ರೀ ಬಸವ ಪ್ರಭು ಸ್ವಾಮೀಜಿ ಯವರಿಗೆ ಕುವೆಂಪು ವಿಶ್ವವಿದ್ಯಾನಿಲಯದಿಂದ  ಪಿಹೆಚ್‌ಡಿ ಪದವಿ ಲಭಿಸಿದೆ.

`ಡಾ. ಶಿವಮೂರ್ತಿ ಮುರುಘಾ ಶರಣರು  ; ಸಾಹಿತ್ಯ ಮತ್ತು ಸಂಸ್ಕೃತಿ’ ವಿಷಯ ಕುರಿತು  ಡಾ. ಸಣ್ಣರಾಮ ಅವರ ಮಾರ್ಗ ದರ್ಶನದಲ್ಲಿ ಮಂಡಿಸಿದ ಮಹಾ ಪ್ರಬಂಧಕ್ಕೆ ಈ ಪದವಿ ನೀಡಲಾಗಿದೆ. ಕುವೆಂಪು ವಿಶ್ವವಿದ್ಯಾನಿಲಯದ ಆವರಣ ದಲ್ಲಿ ಇಂದು ನಡೆದ ಕುವೆಂಪು ವಿವಿ 34ನೇ ಘಟಿಕೋ ತ್ಸವದಲ್ಲಿ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಅವರು ಶ್ರೀ ಬಸವ ಪ್ರಭು ಸ್ವಾಮೀಜಿಯವರಿಗೆ ಪಿಹೆಚ್‌ಡಿ ಪದವಿ ಪ್ರದಾನ ಮಾಡಿದರು.

error: Content is protected !!