ದಾವಣಗೆರೆ, ಜ.19- ಕರ್ನಾಟಕ ರಾಜ್ಯ ಶಿರಸ್ತೇದಾರ್ ಮತ್ತು ಉಪತಹಶೀಲ್ದಾರ್ ಸಂಘದ ದಾವಣಗೆರೆ ಜಿಲ್ಲಾ ಘಟಕದ ನೂತನ ಅಧ್ಯಕ್ಷರಾಗಿ ಮಲೇಬೆನ್ನೂರು ನಾಡ ಕಚೇರಿಯ ಉಪತಹಶೀಲ್ದಾರ್ ಆರ್.ರವಿ ಅವರು ಶನಿವಾರ ಎಸಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಆಯ್ಕೆಯಾಗಿದ್ದಾರೆ.
ಗೌರವಾಧ್ಯಕ್ಷರಾಗಿ ದಾವಣಗೆರೆ ಆಹಾರ ಇಲಾಖೆಯ ಶಿರಸ್ತೇದಾರ್ ಮಂಜಣ್ಣ ರುದ್ರಪ್ಪ ಬಸವಾಪಟ್ಟಣ ಮತ್ತು ರಾಜ್ಯ ಪರಿಷತ್ ಸದಸ್ಯರಾಗಿ ದಾವಣಗೆರೆ ಕೆಐಎಡಿಬಿ ವ್ಯವಸ್ಥಾಪಕ ಶಕೀಲ್ ಅಹಮದ್ ಖಾನ್, ಉಪಾಧ್ಯಕ್ಷರಾಗಿ ಆನಗೋಡು ಹೋಬಳಿ ಉಪತಹಶೀಲ್ದಾರ್ ರಾಮಸ್ವಾಮಿ, ಜಿಲ್ಲಾ ಕಾರ್ಯದರ್ಶಿಯಾಗಿ ಜಿಲ್ಲಾಧಿಕಾರಿ ಕಚೇರಿಯ ಶಿರಸ್ತೇದಾರ್ ವಿ.ಎ.ಶ್ರೀನಿವಾಸ್, ಖಜಾಂಚಿಯಾಗಿ ಹರಿಹರ ತಾಲ್ಲೂಕು ಕಚೇರಿಯ ಹಕ್ಕು ದಾಖಲೆ ಶಿರಸ್ತೇದಾರ್ ಹರ್ಷವರ್ಧನ್, ಸಹ ಕಾರ್ಯದರ್ಶಿ ಯಾಗಿ ಬಸವಾಪಟ್ಟಣ ಉಪತಹಶೀಲ್ದಾರ್ ಮಂಜು ನಾಥ್, ಮಹಿಳಾ ಪ್ರತಿನಿಧಿಯಾಗಿ ಜಿಲ್ಲಾಧಿಕಾರಿ ಕಚೇರಿಯ ಶಿರಸ್ತೇದಾರ್ ಶ್ರೀಮತಿ ಬಿ.ಬಿ.ರೇಣುಕಾ, ಕಾನೂನು ಸಲಹೆಗಾರರಾಗಿ ಹರಿಹರ ತಾಲ್ಲೂಕು ಕಚೇರಿಯ ಚುನಾವಣಾ ಶಿರಸ್ತೇದಾರ್ ಅಶೋಕ್ ಮತ್ತು ಲೆಕ್ಕ ಪರಿಶೋಧಕರಾಗಿ ದಾವಣಗೆರೆ ತಾಲ್ಲೂಕು ಕಚೇರಿಯ ಚುನಾವಣಾ ಶಿರಸ್ತೇದಾರ್ ಮಂಜುನಾಥ್ ಬಾಬು ಆಯ್ಕೆಯಾಗಿದ್ದಾರೆ.
ದಾವಣಗೆರೆ ತಾ. ಸಂಚಾಲಕರಾಗಿ ಸಾಮಾಜಿಕ ಭದ್ರತೆ ಶಿರಸ್ತೇದಾರ್ ನಾಗಲಿಂಗೇಶ್, ಹರಿಹರ ತಾ. ಸಂಚಾಲಕರಾಗಿ ಹಕ್ಕು ದಾಖಲೆಗಳ ಶಿರಸ್ತೇದಾರ್ ಹರ್ಷವರ್ಧನ್, ಹೊನ್ನಾಳಿ ತಾ. ಸಂಚಾಲಕರಾಗಿ ಸಾಸ್ವೇಹಳ್ಳಿ ಉಪತಹಶೀಲ್ದಾರ್ ಚಂದ್ರಪ್ಪ, ನ್ಯಾಮತಿ ತಾ. ಸಂಚಾಲಕರಾಗಿ ಶಿರಸ್ತೇದಾರ್ ಶ್ರೀಮತಿ ಸೌಮ್ಯ, ಚನ್ನಗಿರಿ ತಾ. ಸಂಚಾಲಕರಾಗಿ ಸಂತೇಬೆನ್ನೂರು ಉಪತಹಶೀಲ್ದಾರ್ ಅರುಣ್ಕುಮಾರ್, ಜಗಳೂರು ತಾ. ಸಂಚಾಲಕರಾಗಿ ಚುನಾವಣಾ ಶಿರಸ್ತೇದಾರ್ ಕೆ.ಚಂದ್ರಪ್ಪ ನೇಮಕಗೊಂಡಿದ್ದಾರೆ.