ಮಲೇಬೆನ್ನೂರು, ಜ.19- ಪಟ್ಟಣದ ಹೊರವಲಯದಲ್ಲಿರುವ ಶ್ರೀ ವೀರಭದ್ರೇಶ್ವರ ದೇವಸ್ಥಾನದಲ್ಲಿ ಹಮ್ಮಿಕೊಂಡಿದ್ದ ಮಕರ ಸಂಕ್ರಾಂತಿ ಹಬ್ಬದ ವಿಶೇಷ ಆಚರಣೆ ಸಂದರ್ಭದಲ್ಲಿ ಲಯನ್ಸ್ ಜಿಲ್ಲೆಗೆ ಹೊಸದಾಗಿ ಖರೀದಿಸಿರುವ ಲಯನ್ಸ್ ರಕ್ತನಿಧಿ ಕೇಂದ್ರದ ಆಂಬ್ಯುಲೆನ್ಸ್ ವಾಹನವನ್ನು ಲಯನ್ಸ್ ಮಾಜಿ ಗೌವರ್ನರ್‌ಗಳಾದ ಡಾ. ಟಿ.ಬಸವರಾಜ್, ಡಾ. ಬಿ.ಎಸ್.ನಾಗಪ್ರಕಾಶ್ ಮತ್ತು ವೀರಭದ್ರೇಶ್ವರ ದೇವಸ್ಥಾನದ ಟ್ರಸ್ಟ್ ಕಮಿಟಿ ಉಪಾಧ್ಯಕ್ಷ ಬಿ.ಚಿದಾನಂದಪ್ಪ ಅವರು ಲೋಕಾರ್ಪಣೆ ಗೊಳಿಸಿದರು.
ಲಯನ್ಸ್ ವಲಯಾಧ್ಯಕ್ಷ ಚಿಟ್ಟಕ್ಕಿ ನಾಗರಾಜ್, ಮಲೇಬೆನ್ನೂರು ಲಯನ್ಸ್ ಕ್ಲಬ್ ಅಧ್ಯಕ್ಷೆ ಶ್ರೀಮತಿ ಪಾರ್ವತಮ್ಮ ಇ.ಎಂ.ಮರುಳಸಿದ್ದಪ್ಪ, ಕಾರ್ಯದರ್ಶಿ ಶ್ರೀಮತಿ ರೂಪಾ ಪಾಟೀಲ್, ಮಾಜಿ ಅಧ್ಯಕ್ಷರಾದ ಓ.ಜಿ.ರುದ್ರಗೌಡ್ರು, ಡಾ. ಹೆಚ್.ಜೆ.ಚಂದ್ರಕಾಂತ್, ಎನ್.ಜಿ.ಬಸವನಗೌಡ್ರು, ಎನ್.ಜಿ.ಶಿವಾಜಿ ಪಾಟೀಲ್, ಸಿರಿಗೆರೆ ಸಿದ್ದಣ್ಣ ಮತ್ತು ಡಾ. ವರದಾಕಿರಣ್ ಹಾಗೂ ದಾವಣಗೆರೆ ಲಯನ್ಸ್ ರಕ್ತನಿಧಿ ಕೇಂದ್ರದ ಮೌನೇಶಾಚಾರ್ ಮತ್ತಿತರರು ಈ ವೇಳೆ ಹಾಜರಿದ್ದರು.