ವಚನಾಮೃತ ಬಳಗದಿಂದ ಸಂಕ್ರಾಂತಿ ಆಚರಣೆ

ವಚನಾಮೃತ ಬಳಗದಿಂದ ಸಂಕ್ರಾಂತಿ ಆಚರಣೆ

ದಾವಣಗೆರೆ, ಜ. 17- ವಚನಾಮೃತ ಬಳಗದಿಂದ ಮಂಗಳವಾರ ಸಂಕ್ರಾಂತಿ  ಹಬ್ಬ ಆಚರಿಸಲಾಯಿತು.

ಸುಗ್ಗಿ ಕಾಲದಲ್ಲಿ ರೈತರು ಬೆಳೆದ ಬೆಳೆಗಳನ್ನು ಪೂಜಿಸುವಂತೆಯೇ ಕಾಳು ಕಡಿ, ಭತ್ತದ ರಾಶಿಯನ್ನು, ಕಬ್ಬಿನ ತೆನೆಯನ್ನು ಪೂಜಿಸಲಾಯಿತು. ರೊಟ್ಟಿ, ಬುತ್ತಿ, ಪಲ್ಯ, ಚಟ್ನಿ ಪುಡಿ ಸೇರಿದಂತೆ ವಿವಿಧ ಖಾದ್ಯಗಳ ಭೋಜನವನ್ನು ಬಳಗದ ಸದಸ್ಯರು ಸವಿದರು. ಬಳಗದ ಅಧ್ಯಕ್ಷೆ ಸೌಮ್ಯ ಸತೀಶ್ ಧಾರವಾಡ, ಸರಿತಾ ರಮೇಶ್, ದೀಪಾ ದೇವರಾಜ್,  ಶಿಲ್ಪ ಷಡಕ್ಷರಿ ಜ್ಯೋತಿ ಬಾದಾಮಿ, ಸುಮಾ, ಜ್ಯೋತಿ ರಾಜೇಶ್, ನಿವೇದಿತಾ, ನಳಿನಿ, ಪ್ರೀತಿ, ಸರೋಜ, ಗೀತಾ, ಸೀಮಾ, ಸುಧಾ, ನಾಗರತ್ನ , ದೀಪ, ಅನನ್ಯ, ಸೌಜನ್ಯ, ಸಂಗೀತ, ಶ್ರುತಿ ಇತರರು  ಭಾಗವಹಿಸಿದ್ದರು.

error: Content is protected !!