ದಾವಣಗೆರೆ: ನಗರದ ಪಿ.ಜೆ. ಬಡಾವಣೆಯಲ್ಲಿರುವ ಶ್ರೀ ರಾಘವೇಂದ್ರ ಸ್ವಾಮಿ ಮಠದಲ್ಲಿ ಇಂದು ಸಂಜೆ 4.30ಕ್ಕೆ ಮೆರವಣಿಗೆಯ ಮೂಲಕ ಅನೇಕ ಭಜನಾ ಮಂಡಳಿಗಳ ಸಮ್ಮುಖದಲ್ಲಿ ಕವಚ ಉತ್ಸವ ಏರ್ಪಾಡಾಗಿದೆ. ನಂತರ ರಾಯರ ಮಠದಲ್ಲಿ ಶ್ರೀಮತಿ ಶೋಭಾ ಶಿವಾನಂದ ರಾಯ್ಕರ್ ಮತ್ತು ಶ್ರೀ ಲಲಿತಾ ಭಜನಾ ಮಂಡಳಿ ಸ್ನೇಹ ಬಳಗದಿಂದ ಭಜನೆ ಮತ್ತು ಸಹಸ್ರ ನಾಮಾವಳಿ ನಡೆಯಲಿದೆ. ನಂತರ ಲಘು ಪ್ರಸಾದ ವಿತರಣೆ ವ್ಯವಸ್ಥೆ ಇರುತ್ತದೆ. ನಾಳೆ ಭಾನುವಾರ ಬೆಳಿಗ್ಗೆ 6 ಗಂಟೆಗೆ ಶ್ರೀ 1008 ಸತ್ಯಾತ್ಮತೀರ್ಥ ಶ್ರೀಪಾದಂಗಳವರ ಅಮೃತ ಹಸ್ತದಿಂದ ಕವಚ ಸಮರ್ಪಣೆ ನಡೆಯಲಿದೆ.
January 18, 2025