ಗ್ರಾಮೀಣ ಭಾಗದ ಜನತೆಗೆ ಗ್ರಾಮ ಡಿಜಿ ವಿಕಸನ ಡಿಜಿಟಲ್‌ ಕಾರ್ಯಕ್ರಮ ವರದಾನ

ಗ್ರಾಮೀಣ ಭಾಗದ ಜನತೆಗೆ ಗ್ರಾಮ ಡಿಜಿ ವಿಕಸನ ಡಿಜಿಟಲ್‌ ಕಾರ್ಯಕ್ರಮ ವರದಾನ

ಹರಪನಹಳ್ಳಿ, ಜ. 16 – ಪ್ರಸ್ತುತ 21ನೇ ಶತ ಮಾನದಲ್ಲಿ ಪ್ರತಿಯೊಬ್ಬರಿಗೂ ಡಿಜಿಟಲ್ ತಂತ್ರ ಜ್ಞಾನದ ಅರಿವು ಅಗತ್ಯವಾಗಿದೆ ಎಂದು ಶಾಸಕರಾದ  ಎಂ.ಪಿ. ಲತಾ ಮಲ್ಲಿಕಾರ್ಜುನ್ ಹೇಳಿದರು.

ಪಟ್ಟಣದ ತಾಲ್ಲೂಕು ಪಂಚಾಯಿತಿಯ ರಾಜೀವ ಗಾಂಧಿ ಸಭಾಂಗಣದಲ್ಲಿ ಗ್ರಾಮ ಡಿಜಿ ವಿಕಸನ ಕಾರ್ಯಕ್ರಮದ ಅಡಿಯಲ್ಲಿ ತಾಲ್ಲೂಕಿನ 3 ಗ್ರಾಮ ಪಂಚಾಯತ್‌ನ ಅರಿವು ಕೇಂದ್ರಗಳಿಗೆ ಕಂಪ್ಯೂಟರ್ ಡೆಸ್ಕ್‌ಟಾಪ್‌ಗಳನ್ನು ವಿತರಿಸಿ ಮಾತನಾಡಿದರು.

ಇಲ್ಲಿಯವರೆಗೆ ಪ್ರಸ್ತುತ 5000 ಅರಿವು ಕೇಂದ್ರ ಗಳಲ್ಲಿ ಕಾರ್ಯಕ್ರಮ ಅನುಷ್ಠಾನವಾಗಿದ್ದು,  ಒಟ್ಟು 2791 ಅರಿವು ಕೇಂದ್ರಗಳಿಗ ಡಿಜಿಟಲ್ ಸಂಪನ್ಮೂಲಗಳಾದ ಡೆಲ್ ಕಂಪ್ಯೂಟರ್, ಆಂಡ್ರಾಯ್ಡ್ ಟಿವಿ, ಸ್ಮಾರ್ಟ್ ಫೋನ್ಸ್, ಕ್ರೋಮ್ ಬುಕ್‌ಗಳನ್ನು ನೀಡಲಾಗಿದೆ. ವಿಜಯನಗರ ಜಿಲ್ಲೆಯಲ್ಲಿ ಗ್ರಾಮ ಡಿಜಿ ವಿಕಸನ ಕಾರ್ಯಕ್ರಮ ದಡಿಯಲ್ಲಿ ಒಟ್ಟು 79 ಅರಿವು ಕೇಂದ್ರಗಳಿಗೆ ಡಿಜಿಟಲ್ ಸಂಪನ್ಮೂಲಗಳನ್ನು ವಿತರಿಸಲಾಗಿದೆ ಎಂದರು.

ತಹಶೀಲ್ದಾರ್‌  ಗಿರೀಶ್ ಬಾಬು, ಕಾರ್ಯ ನಿರ್ವಾಹಕ ಅಧಿಕಾರಿ  ವೈ. ಚಂದ್ರಶೇಖರ್, ಶಿಕ್ಷಣ ಫೌಂಡೇಶನ್‌ನ ಜಿಲ್ಲಾ ಸಂಯೋಜಕ ಎಸ್.ಬಿ. ಶ್ರೀಧರ್, ತಾಲ್ಲೂಕು ಸಂಯೋಜಕ ಶಿವರಾಜ್ ತಳವಾರ್  ಸೇರಿದಂತೆ ಇತರರು ಉಪಸ್ಥಿತರಿದ್ದರು.

error: Content is protected !!