ದಾವಣಗೆರೆ, ಜ. 16- ರಾಜ್ಯ ಸರ್ಕಾರದ ಯೋಜನೆಯ ಭಾಗವಾಗಿ ನಗರದ ಬಾಪೂಜಿ ವಿದ್ಯಾಸಂಸ್ಥೆಯ ಕಾಲೇಜ್ ಆಫ್ ಡೆಂಟಲ್ ಸೈನ್ಸಸ್ನಲ್ಲಿ ಲೋಕಸಭಾ ಸದಸ್ಯರಾದ ಡಾ. ಪ್ರಭಾ ಮಲ್ಲಿಕಾರ್ಜುನ್ ಅವರು ದಂತ ಭಾಗ್ಯ ಶಿಬಿರವನ್ನು ಉದ್ಘಾಟಿಸಿದರು.
ಶಿಬಿರದಲ್ಲಿ ಹಾವೇರಿ ಜಿಲ್ಲೆಯ 37 ಫಲಾನುಭವಿ ಗಳಿಗೆ ಉಚಿತ ದಂತ ಪಂಕ್ತಿಗಳನ್ನು `ಪ್ರಾಸ್ತೋಡಾಂಟಿಕ್ ಡೇ’ ಅಂಗವಾಗಿ ಇದೇ ದಿನಾಂಕ 23ರ ಗುರುವಾರ ಉಚಿತವಾಗಿ ವಿತರಿಸಲಾಗುವುದು.
ದಂತ ವೈದ್ಯರೂ ಆಗಿರುವ ಸಂಸದರಾದ ಡಾ. ಪ್ರಭಾ ಮಾತನಾಡಿ, ಬಾಯಿಯ ಆರೋಗ್ಯದ ಬಗ್ಗೆ ಹೆಚ್ಚಿನ ಮಾಹಿತಿ ನೀಡಿದರು. ಇಲ್ಲಿನ ಕೃತಕ ದಂತ ಜೋಡಣಾ ವಿಭಾಗದಿಂದ ನಿಯಮಿತವಾಗಿ ನಡೆಯುತ್ತಿರುವ ಶಿಬಿರದ ಬಗ್ಗೆ ಮತ್ತು ಇಲ್ಲಿಯವರೆಗೆ ಸುಮಾರು 550ಕ್ಕೂ ಹೆಚ್ಚು ಫಲಾನುಭವಿಗಳಿಗೆ ಉಚಿತ ದಂತ ಪಂಕ್ತಿಗಳನ್ನು ವಿತರಿಸಿರುವ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಕಾಲೇಜಿನ ಪ್ರಾಂಶುಪಾಲ ಡಾ. ಐ.ಎಮ್ ಆಲಿ, ನಿರ್ದೇಶಕರಾದ ಡಾ.ವಸುಂಧರ ಶಿವಣ್ಣ, ಕೃತಕ ದಂತ ಜೋಡಣಾ ವಿಭಾಗದ ಮುಖ್ಯಸ್ಥ ಡಾ.ವಿನಯ್ ಕುಮಾರ್, ಪ್ರಾಧ್ಯಾಪಕರಾದ ಡಾ.ವೀಣಾ ಪ್ರಕಾಶ್, ಡಾ. ಎಚ್.ಎಸ್. ಶಶಿಧರ, ಡಾ. ಕೆ.ಟಿ. ರೂಪಾ, ಡಾ. ಎಂ.ಎನ್. ಹೊಂಬೇಶ್, ಡಾ. ಭುವನಾ ಸಚಿನ್, ಡಾ. ಬಿ.ಜಿ. ಪ್ರಸನ್ನ, ಡಾ. ಬಿ. ಪ್ರವೀಣ್, ಡಾ. ಮೊಹಮ್ಮದ್ ಸುಭಾನ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಹಾವೇರಿ ಜಿಲ್ಲೆಯ ದಂತ ಭಾಗ್ಯ ನೋಡಲ್ ಅಧಿಕಾರಿ ಡಾ.ಕಲ್ಪನ ಮತ್ತು ಇತರ ದಂತ ವೈದ್ಯರ ತಂಡ ಹಾಜರಿದ್ದರು. ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಸ್ನಾತಕೋತ್ತರ, ಪದವಿಯೇತರ ವಿದ್ಯಾರ್ಥಿಗಳು ಹಾಗೂ ದಂತ ತಂತ್ರಜ್ಞರು ಸಹಕರಿಸಿದರು.